ಒಲಿಂಪಿಕ್ ಪದಕ ಗೆದ್ದ ಲೊವ್ಲಿನಾರಿಂದ ಹಳ್ಳಿಗೆ ರಸ್ತೆ ಬಂತು!

ನವದೆಹಲಿ| Krishnaveni K| Last Modified ಮಂಗಳವಾರ, 3 ಆಗಸ್ಟ್ 2021 (17:06 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಖಾತ್ರಿ ಮಾಡಿಕೊಂಡಿರುವ ಮಹಿಳಾ ಬಾಕ್ಸಿಂಗ್ ತಾರೆ ಲೊವ್ಲಿನಾ ಬರ್ಗೋಹೆರಿಂದಾಗಿ ಅವರ ಊರಿಗೆ ರಸ್ತೆಯಾಗಿದೆ!

 
ಲೊವ್ಲಿನಾ ಮನೆಗೆ ಹೋಗುವ ಅಸ್ಸಾಂನ ಬಾರಮುತಿಯಾ ಗ್ರಾಮಕ್ಕೆ ಸರಿಯಾದ ರಸ್ತೆಯಿರಲಿಲ್ಲ. ಆದರೆ ಲೊವ್ಲಿನಾ ಮೆಡಲ್ ಖಾತ್ರಿ ಮಾಡಿಕೊಳ್ಳುತ್ತಿದ್ದಂತೇ ಅವರ ಊರಿನ ಶಾಸಕರು ರಸ್ತೆ ರಿಪೇರಿಗೆ ಮುಂದಾಗಿದ್ದಾರೆ.
 
ಸುಮಾರು 3.5 ಕಿ.ಮೀ. ಉದ್ದದ ಕಚ್ಚಾ ರಸ್ತೆಯನ್ನು ಪಿಡಬ್ಲ್ಯು ಇಲಾಖೆ ಸರಿಪಡಿಸಿದ್ದು, ಪದಕ ವಿಜೇತೆ ಟೋಕಿಯೋದಿಂದ ವಾಪಸಾಗುವ ವೇಳೆಗೆ ಭರ್ಜರಿ ಸ್ವಾಗತಕ್ಕೆ ಸಿದ್ಧತೆ ನಡೆಸಿದೆ. ಅಂತೂ ಲೊವ್ಲಿನಾ ನೆಪದಲ್ಲಿ ಆ ಗ್ರಾಮದ ರಸ್ತೆ ರಿಪೇರಿಯಾಗಿದೆ.
ಇದರಲ್ಲಿ ಇನ್ನಷ್ಟು ಓದಿ :