ಮೀರಾಬಾಯಿಗೆ ಚಿನ್ನದ ಸಾಧ್ಯತೆ?! ಚೀನಾ ಪದಕ ವಿಜೇತೆಗೆ ಉದ್ದೀಪನಾ ಪರೀಕ್ಷೆ

ಟೋಕಿಯೋ| Krishnaveni K| Last Modified ಸೋಮವಾರ, 26 ಜುಲೈ 2021 (17:03 IST)
ಟೋಕಿಯೋ: ವೈಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದುಕೊಟ್ಟ ಮೀರಾಬಾಯಿ ಚಾನುಗೆ ಈಗ ಚಿನ್ನದ ಪದಕ ಒಲಿದು ಬರುವ ಸಾಧ‍್ಯತೆಯಿದೆ.
Photo Courtesy: Google

 
ಇದಕ್ಕೆ ಕಾರಣ ಈ ವಿಭಾಗದಲ್ಲಿ ಚಿನ್ನ ಗೆದ್ದಿದ್ದ ಚೀನಾದ ಝೀಹೂ ಹೌ ಈಗ ಉದ್ದೀಪನಾ ಪರೀಕ್ಷೆಗೊಳಗಾಗಲಿದ್ದಾರೆ. ಒಂದು ವೇಳೆ ಪರೀಕ್ಷೆಯಲ್ಲಿ ಅವರು ಉದ್ದೀಪನಾ ಔಷಧಿ ತೆಗೆದುಕೊಂಡಿದ್ದು ಸಾಬೀತಾದರೆ ಅವರಿಗೆ ಲಭಿಸಿದ್ದ ಚಿನ್ನದ ಪದಕ ಮೀರಾಬಾಯಿ ಪಾಲಾಗಲಿದೆ.
 
ಹೀಗಾದಲ್ಲಿ ಮೀರಾಬಾಯಿ ಚಿನ್ನ ಗೆದ್ದ ದಾಖಲೆ ಮಾಡಲಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಬಂದಿಲ್ಲ. ಹೌ 210 49 ಕೆ.ಜಿ. ವಿಭಾಗದಲ್ಲಿ 210 ಕೆ.ಜಿ. ಭಾರ ಎತ್ತುವ ಮೂಲಕ ದಾಖಲೆ ನಿರ್ಮಿಸಿದ್ದರು.
ಇದರಲ್ಲಿ ಇನ್ನಷ್ಟು ಓದಿ :