ದೆಹಲಿಗೆ ಬಂದಿಳಿದ ಮೀರಾಬಾಯಿಗೆ ಭರ್ಜರಿ ಸ್ವಾಗತ

ನವದೆಹಲಿ| Krishnaveni K| Last Modified ಸೋಮವಾರ, 26 ಜುಲೈ 2021 (17:12 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ಪದಕ ವಿಜೇತೆ ವೈಟ್ ಲಿಫ್ಟರ್ ಮೀರಾಬಾಯಿ ಚಾನು ತವರಿಗೆ ವಾಪಸಾಗಿದ್ದು, ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.
Photo Courtesy: Twitter

 
ದೆಹಲಿಯ ವಿಮಾನ ನಿಲ್ದಾಣಕ್ಕೆ ಕೋಚ್ ವಿಜಯ್ ಶರ್ಮಾ ಜೊತೆ ಬಂದಿಳಿದ ಬೆಳ್ಳಿ ಹುಡುಗಿಗೆ ‘ಭಾರತ್ ಮಾತಾ ಕೀ ಜೈ’ ಎಂಬ ಉದ್ಘೋಷದೊಂದಿಗೆ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದ ಅಧಿಕಾರಿಗಳು ಖುದ್ದಾಗಿ ಬಂದು ಸ್ವಾಗತ ಮಾಡಿದರು.
 
ಬಳಿಕ ಅಲ್ಲಿಯೇ ಕೊರೋನಾ ಪರೀಕ್ಷೆಗೆ ಗಂಟಲು ದ್ರವ ಮಾದರಿ ನೀಡಿದ ಮೀರಾಬಾಯಿ ಹೊರಬರುತ್ತಿದ್ದಂತೇ ನೆರೆದಿದ್ದ ಜನ ಜೈಕಾರ ಕೂಗಿ, ಸೆಲ್ಫೀ ಪಡೆದುಕೊಂಡು ಖುಷಿಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :