ನವದೆಹಲಿ: ಅಂತಾರಾಷ್ಟ್ರೀಯ ಟೆನಿಸ್ ಪಂದ್ಯದ ನಡುವೆ ಪದೇ ಪದೇ ಶೌಚಾಲಯಕ್ಕೆ ಹೋಗಿ ಪಂದ್ಯ ವಿಳಂಬ ಮಾಡುವ ಆಟಗಾರರ ಖಯಾಲಿಗೆ ಇನ್ನು ಕತ್ತರಿ ಬೀಳಲಿದೆ.ಎಟಿಪಿ ಅಂತಹದ್ದೊಂದು ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಇಷ್ಟು ದಿನ ಪಂದ್ಯದ ನಡುವೆ ಆಟಗಾರ ಎಷ್ಟು ಹೊತ್ತು ಬೇಕಾದರೂ ಶೌಚಾಲಯಕ್ಕೆ ಹೋಗಲು ಬ್ರೇಕ್ ತೆಗೆದುಕೊಳ್ಳಬಹುದಿತ್ತು ಮತ್ತು ವೈದ್ಯಕೀಯ ವಿಶ್ರಾಂತಿ ಪಡೆಯಬಹುದಿತ್ತು.ಆದರೆ ಸೋಲುವ ಹಂತದಲ್ಲಿ ಕೆಲವು ಆಟಗಾರರು ಎದುರಾಳಿಯ ಲಯ ಕೆಡಿಸಲು ಈ ನಿಯಮಗಳ ದುರ್ಬಳಕೆ ಮಾಡುತ್ತಾರೆ ಎಂಬ