ಭಾರತೀಯರ ಕಣ್ಮಣಿಯಾದ ಪಿ.ವಿ. ಸಿಂಧು ವಿದೇಶೀ ಕೋಚ್

ನವದೆಹಲಿ| Krishnaveni K| Last Modified ಮಂಗಳವಾರ, 3 ಆಗಸ್ಟ್ 2021 (12:17 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಜೊತೆಗೆ ಅವರ ದಕ್ಷಿಣ ಕೊರಿಯಾ ಮೂಲದ ಕೋಚ್ ಪಾರ್ಕ್ ತೆ ಸಂಗ್ ಕೂಡಾ ಅಷ್ಟೇ ಜನಪ್ರಿಯರಾಗಿದ್ದಾರೆ.

 
ಪಿ.ವಿ.ಸಿಂಧು ಪಂದ್ಯವಾಡುವಾಗ ಪ್ರತೀ ಹಂತದಲ್ಲೂ ಆಕೆಗೆ ನಿರ್ದೇಶನ ನೀಡುತ್ತಾ ಕೂತಿದ್ದ ಪಾರ್ಕ್ ತಾವೇ ಗೆಲುವು ಸಾಧಿಸಿದಂತೆ ಬೀಗುತ್ತಿದ್ದರು. ಅದರಲ್ಲೂ ಕ್ವಾರ್ಟರ್ ಫೈನಲ್ ಪಂದ್ಯ, ಕಂಚಿನ ಪದಕಕ್ಕಾಗಿ ಆಡಿದ ಪಂದ್ಯವನ್ನು ಸಿಂಧು ಗೆದ್ದ ಮೇಲಂತೂ ಪಾರ್ಕರ್ ಕುಣಿದಾಡಿದ್ದನ್ನು ನೋಡಿ ನೆಟ್ಟಿಗರು ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.
 
ಅಲ್ಲದೆ ಸಿಂಧು ಕಂಚಿನ ಪದಕ ಗೆದ್ದ ಬಳಿಕ ತಮ್ಮ ಕಡೆಗೆ ಬಂದ ಕೂಡಲೇ ಆಕೆಯನ್ನು ಅಭಿನಂದಿಸಿ ತಕ್ಷಣವೇ ಎದುರಾಳಿಗೆ ಹಾರೈಸಲು ತಿಳಿಸಿದ ರೀತಿ ಭಾರತೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದಲ್ಲದೆ, ಸಿಂಧು ಜೊತೆಗೆ ಭಾರತದ ಧ್ವಜ ಹಿಡಿದುಕೊಂಡು ಪದಕದ ಜೊತೆಗೆ ಸಂಭ್ರಮಿಸಿದ್ದು ನೋಡಿ ಭಾರತೀಯರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :