ಸೆಮಿಫೈನಲ್ ನಲ್ಲಿ ಸೋತು ನಿರಾಸೆ ಅನುಭವಿಸಿದ ಪಿ.ವಿ. ಸಿಂಧು

ಟೋಕಿಯೋ| Krishnaveni K| Last Modified ಶನಿವಾರ, 31 ಜುಲೈ 2021 (16:44 IST)
ಟೋಕಿಯೋ: ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸತತ ಎರಡನೇ ಬಾರಿಗೆ ಫೈನಲ್ಸ್ ತಲುಪಿ ಚಿನ್ನದ ಪದಕ ಗೆಲ್ಲುವ ಭಾರತದ ಭರವಸೆಯ ತಾರೆ ಪಿ.ವಿ. ಸಿಂಧು ಕನಸು ಭಗ್ನಗೊಂಡಿದೆ.  
> ಸೆಮಿಫೈನಲ್ ನಲ್ಲಿ ವಿಶ್ವ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ 21-18, 21-12 ಅಂತರದಿಂದ ಸೋಲು ಅನುಭವಿಸಿದರು.>   ಇಂದು ಸಿಂಧುವಿಗೆ ದುರಾದೃಷ್ಟ ಬೆನ್ನು ಹತ್ತಿತ್ತು. ಮೊದಲ ಸೆಟ್ ನಲ್ಲಿ ಉತ್ತಮ ಪೈಪೋಟಿ ನೀಡಿದರೂ ಎರಡನೇ ಸೆಟ್ ನಲ್ಲಿ ಯಿಂಗ್ ವಿರುದ್ಧ ಸಂಪೂರ್ಣ ಶರಣಾದರು. ಕೆಲವೊಂದು ಮಿಸ್ ಜಡ್ಜ್ ಮೆಂಟ್, ತಮ್ಮ ಮೆಚ್ಚಿನ ಸ್ಮ್ಯಾಶ್ ಹೊಡೆತಗಳು ಫಲಗೊಡದೇ ಸಿಂಧು ಅಂಕಗಳನ್ನು ಸತತವಾಗಿ ಕಳೆದುಕೊಳ್ಳಬೇಕಾಯಿತು. ಇದರಿಂದಾಗಿ ಇಂದು ವಿಶ್ವ ನಂ.1 ಆಟಗಾರ್ತಿಯ ಎದುರು ಸಂಪೂರ್ಣ ಶರಣಾದರು.ಇದರಲ್ಲಿ ಇನ್ನಷ್ಟು ಓದಿ :