ತವರಿಗೆ ಬಂದ ಪಿ.ವಿ. ಸಿಂಧುಗೆ ಭರ್ಜರಿ ಸ್ವಾಗತ

ನವದೆಹಲಿ| Krishnaveni K| Last Modified ಮಂಗಳವಾರ, 3 ಆಗಸ್ಟ್ 2021 (16:42 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ತವರಿಗೆ ವಾಪಸಾಗಿದ್ದಾರೆ.

 
ದೆಹಲಿಯ ವಿಮಾನ ನಿಲ್ದಾಣದಲ್ಲಿ ಸಿಂಧು ಬಂದಿಳಿದಿದ್ದು, ನೂರಾರು ಜನರು ಜಮಾಯಿಸಿ ಚಾಂಪಿಯನ್ ಆಟಗಾರ್ತಿಗೆ ಜೈಕಾರ ಹಾಕುವ ಮೂಲಕ ಭರ್ಜರಿ ಸ್ವಾಗತ ಕೋರಿದ್ದಾರೆ. ಭಾರೀ ನೂಕು ನುಗ್ಗಲಿನ ನಡುವೆ ಸಿಂಧು ಗಮ್ಯ ಸ್ಥಾನಕ್ಕೆ ತೆರಳಿದರು.
 
ಇದಕ್ಕೂ ಮಾಧ‍್ಯಮಗಳ ಮುಂದೆ ಮಾತನಾಡಿರುವ ಅವರು ಈ ಗೆಲುವು ಖುಷಿ ತಂದಿದೆ ಎಂದಿದ್ದಾರೆ. ಸಿಂಧು ನೇರವಾಗಿ ತವರಿಗೆ ತೆರಳುತ್ತಾರೋ ಅಥವಾ ಪ್ರಧಾನಿ ಮೋದಿ ಭೇಟಿಯಾಗಿಯೇ ತೆರಳಲಿದ್ದಾರೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ.




ಇದರಲ್ಲಿ ಇನ್ನಷ್ಟು ಓದಿ :