ನಾಳೆ ಕಂಚಿನ ಪದಕಕ್ಕಾಗಿ ಚೀನಾ ಆಟಗಾರ್ತಿಯ ವಿರುದ್ಧ ಪಿ.ವಿ. ಸಿಂಧು ಪಂದ್ಯ

ಟೋಕಿಯೋ| Krishnaveni K| Last Modified ಶನಿವಾರ, 31 ಜುಲೈ 2021 (16:54 IST)
ಟೋಕಿಯೋ: ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ನಲ್ಲಿ ಸೋಲು ಅನುಭವಿಸಿರುವ ಭಾರತದ ಬ್ಯಾಡ್ಮಿಟಂನ್ ತಾರೆ ಪಿ.ವಿ. ಸಿಂಧು ನಾಳೆ ಬೆಳಿಗ್ಗೆ ನಡೆಯಲಿರುವ ಪಂದ್ಯದಲ್ಲಿ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
Photo Courtesy: Twitter

 
ನಾಳೆ ಬೆಳಿಗ್ಗಿನ ಜಾವ 5 ಗಂಟೆಗೆ ನಡೆಯಲಿರುವ ಪಂದ್ಯದಲ್ಲಿ ಸಿಂಧು ಚೀನಾದ ಹೇ ಬಿಂಗ್ಜಾವ್ ವಿರುದ್ಧ ಸೆಣಸಲಿದ್ದಾರೆ. ಈ ಮೂಲಕ ಕನಿಷ್ಠ ಕಂಚಿನ ಪದಕ ಗೆದ್ದು ಭಾರತೀಯರ ನಿರೀಕ್ಷೆ ನಿಜ ಮಾಡುತ್ತಾರಾ ಕಾದು ನೋಡಬೇಕು.
 
ಸೆಮಿಫೈನಲ್ ನಲ್ಲಿ ಸಿಂಧು ವಿಶ್ವ ನಂ.1 ಆಟಗಾರ್ತಿ ಚೈನೀಸ್ ತೈಪೆಯ ತೈ ಜು ಯಿಂಗ್ ವಿರುದ್ಧ ಸೋತಿದ್ದರು. ಹಾಗಿದ್ದರೂ ಸತತವಾಗಿ ಎರಡು ಒಲಿಂಪಿಕ್ಸ್ ಸೆಮಿಫೈನಲ್ಸ್ ವರೆಗೆ ಆಡಿದ ಹೆಮ್ಮೆ ಸಿಂಧುವಿನದ್ದಾಗಿದೆ.
ಇದರಲ್ಲಿ ಇನ್ನಷ್ಟು ಓದಿ :