ದುಬೈ: ಮುಂಬರುವ ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಕೆಲವು ದಿನ ಬಾಕಿಯಿರುವಾಗಲೇ ಪಾಕ್ ನಾಯಕ ಬಾಬರ್ ಅಜಮ್ ಟೀಂ ಇಂಡಿಯಾ ಟಿ20 ತಂಡಕ್ಕೆ ಟಾಂಗ್ ಕೊಟ್ಟಿದ್ದಾರೆ.‘ಟೀಂ ಇಂಡಿಯಾ ಈ ವಿಶ್ವಕಪ್ ನ ಆತಿಥ್ಯ ವಹಿಸಿದರೂ ಇದು ನಡೆಯುತ್ತಿರುವುದು ಯುಎಇನಲ್ಲಿ. ಇಲ್ಲಿನ ವಾತಾವರಣ ನಮ್ಮ ತವರಿನಂತಿದೆ. ಹೀಗಾಗಿ ನಮಗಿಂತ ಹೆಚ್ಚು ಭಾರತೀಯರಿಗೆ ಒತ್ತಡ ಜಾಸ್ತಿ. ಅದೂ ಅಲ್ಲದೆ, ಭಾರತ ಈಗ