ಟೋಕಿಯೋ: ಒಲಿಂಪಿಕ್ಸ್ ನಲ್ಲಿ 41 ವರ್ಷಗಳ ಬಳಿಕ ಪದಕ ಗೆದ್ದ ಭಾರತ ಪುರುಷರ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಸೇರಿದಂತೆ ಸೆಲೆಬ್ರಿಟಿಗಳು, ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಇದು ಐತಿಹಾಸಿಕ ಕ್ಷಣ. ಕಂಚು ಗೆದ್ದ ಹಾಕಿ ತಂಡದ ಪ್ರತಿಯೊಬ್ಬ ಆಟಗಾರನಿಗೂ ಅಭಿನಂದನೆಗಳು. ಈ ಗೆಲುವಿನೊಂದಿಗೆ ಅವರು ಇಡೀ ದೇಶದ ಚಿತ್ರಣವನ್ನು ಅದರಲ್ಲೂ ವಿಶೇಷವಾಗಿ ಯುವಜನರ ಮನಸ್ಥಿತಿಯನ್ನು ಸೆರೆಹಿಡಿದಿದ್ದಾರೆ. ಭಾರತ ನಮ್ಮ ಹಾಕಿ ತಂಡದ ಬಗ್ಗೆ ಹೆಮ್ಮೆ ಹೊಂದಿದೆ’ ಎಂದು ಪ್ರಧಾನಿ ಮೋದಿ