ಸೆಮಿಫೈನಲ್ ಸೋತ ಹಾಕಿ ತಂಡಕ್ಕೆ ಪ್ರಧಾನಿ ಮೋದಿ ಸಾಂತ್ವನಿಸಿದ್ದು ಹೀಗೆ!

ನವದೆಹಲಿ| Krishnaveni K| Last Modified ಮಂಗಳವಾರ, 3 ಆಗಸ್ಟ್ 2021 (09:50 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಪುರುಷರ ಹಾಕಿ ತಂಡ ಸೆಮಿಫೈನಲ್ ನಲ್ಲಿ ಆಘಾತಕಾರಿಯಾಗಿ ಸೋತ ಬಳಿಕ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದಾರೆ.

 
ಪುರುಷರ ಹಾಕಿ ತಂಡ ಸೆಮಿಫೈನಲ್ ಸೋತ ಬಳಿಕ ಸಾಮಾಜಿಕ ಜಾಲತಾಣ ಮೂಲಕ ಸಂದೇಶ ನೀಡಿರುವ ಮೋದಿ, ಸೋಲು-ಗೆಲುವು ಆಟದ ಭಾಗ ಎಂದು ಸಮಾಧಾನಿಸಿದ್ದಾರೆ.
 
ಫೈನಲ್ ತಲುಪುವ ಅವಕಾಶ ಸ್ವಲ್ಪದರಲ್ಲೇ ಕೈತಪ್ಪಿ ನಿರಾಸೆಯಲ್ಲಿರುವ ಹಾಕಿ ತಂಡಕ್ಕೆ ಸಾಂತ್ವನಿಸಿರುವ ಪ್ರಧಾನಿ ‘ಪುರುಷರ ಹಾಕಿ ತಂಡ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದೆ. ಸೋಲು-ಗೆಲುವು ಆಟದ ಭಾಗ. ನಿಮ್ಮ ಮುಂದಿನ ಆಟಕ್ಕೆ ಶುಭ ಹಾರೈಸುತ್ತೇನೆ. ನಮ್ಮ ಆಟಗಾರರ ಬಗ್ಗೆ ದೇಶಕ್ಕೆ ಹೆಮ್ಮೆಯಿದೆ’ ಎಂದು ಸ್ಪೂರ್ತಿ ತುಂಬಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :