ಪದಕ ಗೆಲ್ಲುವ ಅವಕಾಶ ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಪೂಜಾ ರಾಣಿ

ಟೋಕಿಯೋ| Krishnaveni K| Last Modified ಶನಿವಾರ, 31 ಜುಲೈ 2021 (16:47 IST)
ಟೋಕಿಯೋ: ಬಾಕ್ಸಿಂಗ್ ವಿಭಾಗದಲ್ಲಿ ಮತ್ತೊಂದು ಪದಕ ಗೆಲ್ಲುವ ಭಾರತದ ಕನಸು ಭಗ್ನವಾಗಿದೆ. 75 ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಪೂಜಾ ರಾಣಿ ಚೀನಾ ಲಿ ಖಿಯಾನ್ ವಿರುದ್ಧ ಸೋಲು ಅನುಭವಿಸಿದ್ದಾರೆ.
Photo Courtesy: Google
 > ಕ್ವಾರ್ಟರ್ ಫೈನಲ್ ತಲುಪಿ ಪದಕದ ಭರವಸೆ ಮೂಡಿಸಿದ್ದ ಪೂಜಾ ಮೊದಲ ಒಲಿಂಪಿಕ್ಸ್ ನಲ್ಲೇ ಅಪೂರ್ವ ದಾಖಲೆ ಮಾಡುವ ಅವಕಾಶ ಹೊಂದಿದ್ದರು. ಆದರೆ ಇಂದು ತನಗಿಂತ ಕಿರಿಯ ವಯಸ್ಸಿನ ಎದುರಾಳಿ ಜೊತೆ ಮೂರೂ ಸುತ್ತಿನಲ್ಲಿ ಹೋರಾಟ ನಡೆಸಿದರೂ ಗೆಲುವು ದಕ್ಕಲಿಲ್ಲ.>   ಒಂದು ವೇಳೆ ಪೂಜಾ ಇಂದು ಗೆದ್ದಿದ್ದರೆ ಮೇರಿ ಕೋಮ್, ವಿಜೇಂದರ್ ಸಿಂಗ್ ಮತ್ತು ಲೊವ್ಲಿನಾ ಬಳಿಕ ಬಾಕ್ಸಿಂಗ್ ವಿಭಾಗದಲ್ಲಿ ಒಲಿಂಪಿಕ್ ಪದಕ ಗೆದ್ದ ನಾಲ್ಕನೇ ಭಾರತೀಯಳೆನಿಸಿಕೊಳ್ಳುತ್ತಿದ್ದರು.ಇದರಲ್ಲಿ ಇನ್ನಷ್ಟು ಓದಿ :