ಹೈದರಾಬಾದ್: ಭಾರತೀಯ ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಇಬ್ಬರೂ ಎರಡು ಮಿನುಗುವ ನಕ್ಷತ್ರಗಳಿದ್ದಂತೆ. ಇಬ್ಬರೂ ಮಹಿಳಾ ಕ್ರೀಡಾಪಟುಗಳಿಗೆ ಹೊಸ ಹುರುಪು ತಂದವರು. ಆದರೆ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಇಬ್ಬರ ನಡುವಿನ ಶೀತಲ ಸಮರದ ಬಗ್ಗೆ ಸ್ವತಃ ಸಿಂಧು ಮಾತನಾಡಿದ್ದಾರೆ. ನಿಜವಾಗಿ ನಿಮ್ಮಿಬ್ಬರ ನಡುವೆ ಸ್ನೇಹ ಇದೆಯಾ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಸಿಂಧು ನಾವಿಬ್ಬರೂ ಗಂಟೆಗಟ್ಟಲೆ ಜತೆ ಕೂತುಕೊಂಡು ಹರಟುವ ಸ್ನೇಹಿತರಲ್ಲ.