ಶೇಕ್ ಹ್ಯಾಂಡ್ ಮಾಡಲ್ಲ ಎಂದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

ಹೈದರಾಬಾದ್| Krishnaveni K| Last Modified ಸೋಮವಾರ, 9 ಮಾರ್ಚ್ 2020 (09:15 IST)
ಹೈದರಾಬಾದ್: ಕೊರೊನಾವೈರಸ್ ಭೀತಿಯಿಂದಾಗಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಇನ್ಮುಂದೆ ಶೇಕ್ ಹ್ಯಾಂಡ್ ಮಾಡುವ ಬದಲು ನಮಸ್ತೆ ಮಾಡುವುದಾಗಿ ಹೇಳಿದ್ದಾರೆ.

 
ಮುಂಬರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲಿರುವ ಸಿಂಧು ಈ ವೇಳೆ ಎದುರಾಳಿ ಆಟಗಾರ್ತಿಯರಿಗೆ ಹಸ್ತಾಲಾಘವ ನೀಡುವ ಬದಲು ನಮಸ್ತೆ ಮಾಡುವುದಾಗಿ ಹೇಳಿದ್ದಾರೆ.
 
ವಿಶ್ವದಾದ್ಯಂತ ಕೊರೊನಾವೈರಸ್ ಭೀತಿಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹಸ್ತಾಲಾಘವ ಮಾಡುವುದು, ಅಭಿಮಾನಿಗಳೊಂದಿಗೆ ಬೆರೆಯುವುದಕ್ಕೆ ಆಟಗಾರರು ಹಿಂಜರಿಯುವಂತಾಗಿದೆ.
ಇದರಲ್ಲಿ ಇನ್ನಷ್ಟು ಓದಿ :