ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಕುಸ್ತಿಪಟು ರವಿಕುಮಾರ್ ದಹಿಯಾಗೆ ಎದುರಾಳಿ ಕಚ್ಚಿ ಗಾಯಗೊಳಿಸಿದ್ದು ಭಾರೀ ಸುದ್ದಿಯಾಗಿತ್ತು.ಇದರ ಬಗ್ಗೆ ಇದೀಗ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ತನಗೆ ಕಚ್ಚಿದ್ದ ಕಝಕಿಸ್ತಾನ್ ನ ಎದುರಾಳಿ ಬಳಿಕ ಕ್ಷಮೆ ಕೇಳಿದ್ದ ಎಂದು ರವಿಕುಮಾರ್ ಹೇಳಿದ್ದಾರೆ.ಘಟನೆ ನಡೆದ ಮರುದಿನ ಸನಯೇವ್ ನನಗಾಗಿ ಕಾದು ಕುಳಿತಿದ್ದರು. ನನ್ನ ಕಂಡಕೂಡಲೇ ಕೈಕುಲುಕಿ ನನ್ನ ‘ಸಾರಿ ಬ್ರದರ್’ ಎಂದು ಕೇಳಿದರು. ನಾನು ಆಗಲೇ ಆ ವಿಚಾರವನ್ನು ಮರೆತಿದ್ದೆ.