ಮೊದಲ ಸೆಟ್ನಲ್ಲಿ ಸೋತರೂ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾ ಎರಡು ಮತ್ತು ಮೂರನೇ ಸೆಟ್ನಲ್ಲಿ ಹಣಾಹಣಿ ಹೋರಾಟ ನೀಡಿ ಆಸ್ಟ್ರೇಲಿಯಾ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಮೊದಲ ಸೆಟ್ನಲ್ಲಿ ಚೀನಾದ ಸನ್ ಯು ಅವರ ವಿರುದ್ಧ 11-21ರಿಂದ ಸೋತರೂ ವಿಚಲಿತರಾಗದ ಸೈನಾ ಎರಡು ಮತ್ತು ಮೂರನೇ ಸೆಟ್ಗಳನ್ನು 21-14 ಮತ್ತು 21-19ರಿಂದ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡರು.