ಸೈನಾ ನೆಹ್ವಾಲ್ ಮದುವೆಯ ಆಹ್ವಾನ ಪತ್ರಿಕೆ ಈಗ ವೈರಲ್

ಹೈದರಾಬಾದ್, ಶುಕ್ರವಾರ, 30 ನವೆಂಬರ್ 2018 (09:01 IST)

ಹೈದರಾಬಾದ್: ಸೆಲೆಬ್ರಿಟಿಗಳೆಲ್ಲಾ ಒಬ್ಬರಾದ ಮೇಲೊಬ್ಬರಂತೆ ಮದುವೆಯಾಗುತ್ತಲೇ ಇದ್ದು, ಅಭಿಮಾನಿಗಳಿಗೆ ಕಣ್ಣಿಗೆ ಹಬ್ಬದ ಸಂಭ್ರಮ ನೀಡುತ್ತಿದ್ದಾರೆ. ದೀಪಿಕಾ-ರಣವೀರ್ ಮದುವೆಯ ನಂತರ ಇದೀಗ ಖ್ಯಾತ ಬ್ಯಾಡ್ಮಿಂಟನ್ ಪಟುಗಳಾದ ಸೈನಾ ನೆಹ್ವಾಲ್-ಪಾರುಪಳ್ಳಿ ಕಶ್ಯಪ್ ಜೋಡಿಯ ಮದುವೆಯ ಸುದ್ದಿ ಹರಿದಾಡುತ್ತಿದೆ.
 
ಇತ್ತೀಚೆಗಷ್ಟೇ ಇವರು ಮದುವೆಯ ಸುದ್ದಿಯನ್ನು ಖಚಿತಪಡಿಸಿದ್ದರು. ಡಿಸೆಂಬರ್ 16 ರಂದು ಹೈದರಾಬಾದ್ ನಲ್ಲಿ ಈ ತಾರಾ ಜೋಡಿಯ ವಿವಾಹ ಸಮಾರಂಭ ನಡೆಯಲಿದ್ದು, ಅದೇ ದಿನ ಸಂಜೆ ಆರತಕ್ಷತೆಯೂ ನಡೆಯಲಿದೆ.
 

ಈ ವಿವಾಹದ ಆಹ್ವಾನ ಪತ್ರಿಕೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋಷಕರ ಹೆಸರಿನಲ್ಲಿ ಮದುವೆಯ ಆಹ್ವಾನ ಪತ್ರಿಕೆಯಿದ್ದರೆ, ಸೈನಾ ಮತ್ತು ಕಶ್ಯಪ್ ತಮ್ಮ ಹೆಸರಿನಲ್ಲಿ ಆರತಕ್ಷತೆಯ ಆಹ್ವಾನ ನೀಡಿದ್ದಾರೆ. ಈ ಮದುವೆಗೆ ಕ್ರೀಡಾ ಲೋಕದ ಗಣ್ಯರ ದಂಡೇ ಹರಿದುಬರುವ ನಿರೀಕ್ಷೆಯಿದೆ.
 


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕೆಎಲ್ ರಾಹುಲ್ ಮೇಲೆ ಸಿಟ್ಟಿಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವು ಎಂದರೆ ಕೆಎಲ್ ರಾಹುಲ್. ಏನೇ ...

news

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಮೊದಲ ಗೆಲುವಿನ ಅವಕಾಶ

ಮೈಸೂರು: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಗೆಲುವಿನ ಉತ್ಸಾಹದಲ್ಲಿ ...

news

ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಭರ್ಜರಿ ಪ್ಲ್ಯಾನ್ ಮಾಡಿರುವ ವಿರಾಟ್-ಅನುಷ್ಕಾ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11 ರಂದು ತಮ್ಮ ಮೊದಲ ವಿವಾಹ ...

news

ಏಷ್ಯಾ ಕಪ್ ನಲ್ಲಿ ಧೋನಿ ನಾಯಕರಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಬಿಸಿಸಿಐ?!

ಮುಂಬೈ: ದುಬೈನಲ್ಲಿ ನಡೆದಿದ್ದ ಏಷ್ಯಾ ಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ರೋಹಿತ್ ಶರ್ಮಾ ಧೋನಿಗೆ ...