ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಪುರುಷರ ಬ್ಯಾಡ್ಮಿಂಟನ್ ಚಾಂಪಿಯನ್ ಪಾರುಪಳ್ಳಿ ಕಶ್ಯಪ್ ರನ್ನು ಮದುವೆಯಾಗುತ್ತಿರುವ ಸುದ್ದಿ ಎಲ್ಲರೂ ಓದಿರುತ್ತೀರಿ.ಡಿಸೆಂಬರ್ 16 ರಂದು ಈ ತಾರಾ ಜೋಡಿ ಮದುವೆಯಾಗಲಿದ್ದಾರೆ ಎಂದು ಸುದ್ದಿ ಬಂದಿತ್ತು. ಇದರ ಬಗ್ಗೆ ಇದೀಗ ಸ್ವತಃ ಸೈನಾ ನೆಹ್ವಾಲ್ ಬಾಯ್ಬಿಟ್ಟಿದ್ದಾರೆ.ಡಿಸೆಂಬರ್ 16 ರಂದು ಮಾತ್ರ ನನಗೆ ಮದುವೆಯಾಗಲು ಪುರುಸೊತ್ತಿದೆ. ಅದಕ್ಕೆ ಅದೇ ದಿನವೇ ನಾವು ಮದುವೆಯಾಗಬೇಕಷ್ಟೇ. ಡಿಸೆಂಬರ್ 20 ರ ನಂತರ ಬ್ಯಾಡ್ಮಿಂಟನ್ ಲೀಗ್ ನಲ್ಲಿ ಬ್ಯುಸಿಯಾಗುತ್ತೇನೆ