ಆದ್ರೂ ಪಾಕಿಸ್ತಾನವನ್ನು ಖಂಡಿಸಿಲ್ವಲ್ಲಾ..? ಸಾನಿಯಾ ಮಿರ್ಜಾ ವಿರುದ್ಧ ಟ್ವಿಟರಿಗರ ಸಿಟ್ಟು

ನವದೆಹಲಿ, ಮಂಗಳವಾರ, 19 ಫೆಬ್ರವರಿ 2019 (09:59 IST)

ನವದೆಹಲಿ: ಪುಲ್ವಾಮಾದಲ್ಲಿ ಪಾಕ್ ಪ್ರೇರಿತ ಉಗ್ರರು ಭಾರತೀಯ ಯೋಧರ ಮೇಲೆ ದಾಳಿ ಮಾಡಿದ ಪ್ರಕರಣ ನಡೆದ ತಕ್ಷಣವೇ ಟ್ವೀಟ್ ಮಾಡಲಿಲ್ಲ ಎಂದು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೇಲೆ ಗರಂ ಆಗಿದ್ದ ಟ್ವಿಟರಿಗರು ಇದೀಗ ಮತ್ತೆ ಆಕ್ರೋಶ ಹೊರಹಾಕಿದ್ದಾರೆ.


 
ಸಾನಿಯಾ ಪಾಕ್ ಮೂಲದ ಶೊಯೇಬ್ ಮಲಿಕ್ ರನ್ನು ವಿವಾಹವಾದ ಕಾರಣ ಆಗಾಗ ಭಾರತ-ಪಾಕ್ ವಿಚಾರಕ್ಕೆ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ. ಇದೀಗ ಘಟನೆ ಬಗ್ಗೆ ತಮ್ಮ ಸಂತಾಪ ವ್ಯಕ್ತಪಡಿಸಿ ಜತೆಗೆ ತಾವು ಟ್ವೀಟ್ ಮಾಡಲಿಲ್ಲವೆಂದು ಟ್ರೋಲ್ ಮಾಡಿದವರಿಗೆ ಸಾನಿಯಾ ತಿರುಗೇಟು ಕೊಟ್ಟ ಮೇಲೂ ಟೀಕಾಕಾರರು ಸುಮ್ಮನಾಗಿಲ್ಲ.
 
ಸಾನಿಯಾ ಸುದೀರ್ಘ ಪತ್ರ ಬರೆದು ಉಗ್ರರ ಕೃತ್ಯವನ್ನು ಖಂಡಿಸಿದ್ದರು. ಫೆಬ್ರವರಿ 14 ನಮಗೆ ಕರಾಳ ದಿನ ಎಂದಿದ್ದರು. ಯೋಧರ ಹತ್ಯೆಗೆ ಸಂತಾಪ ವ್ಯಕ್ತಪಡಿಸಿದ್ದರು. ಎಲ್ಲಾ ಸರಿ, ಆದರೆ ತಾವು ಸೊಸೆಯಾಗಿರುವ ಪಾಕಿಸ್ತಾನದ ಬಗ್ಗೆ ಚಕಾರವೆತ್ತಿಲ್ಲ. ಇದು ಟ್ವಿಟರಿಗರ ಆಕ್ರೋಶಕ್ಕೆ ಕಾರಣವಾಗಿದೆ.
 
ಇಷ್ಟೆಲ್ಲಾ ಹೇಳಿದ ನೀವು ಪಾಕಿಸ್ತಾನವನ್ನು ಖಂಡಿಸುವ ಧೈರ್ಯ ಮಾಡಲಿಲ್ಲವೇಕೆ ಎಂದು ಟ್ವಿಟರಿಗರು ಸಾನಿಯಾ ಕಾಲೆಳೆದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹುತಾತ್ಮ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಧನಸಹಾಯ ಮಾಡಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧರ ಕುಟುಂಬಗಳಿಗೆ ಟೀಂ ...

news

ಪಾಕ್ ವಿರುದ್ಧ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಆಡುತ್ತಾ ಎಂದಿದ್ದಕ್ಕೆ ಐಪಿಎಲ್ ಮುಖ್ಯಸ್ಥರು ಹೇಳಿದ್ದೇನು ಗೊತ್ತಾ?!

ಮುಂಬೈ: ಪುಲ್ವಾಮಾದಲ್ಲಿ ಭಾರತೀಯ ಯೋಧರು ಹುತಾತ್ಮರಾದ ಬಳಿಕ ಪಾಕಿಸ್ತಾನ ವಿರುದ್ಧ ಭಾರತದೆಲ್ಲೆಡೆ ಆಕ್ರೋಶ ...

news

2019 ರ ವಿಶ್ವಕಪ್ ಬಳಿಕ ಕ್ರಿಸ್ ಗೇಲ್ ತಿಳಿಸಲಿದ್ದಾರೆ ಈ ಮಹತ್ವದ ನಿರ್ಧಾರ!

ಮುಂಬೈ: ಐಪಿಎಲ್ ಕ್ರಿಕೆಟ್ ನಿಂದಾಗಿ ಭಾರತದಲ್ಲೂ ಅಪಾರ ಜನಪ್ರಿಯತೆ ಹೊಂದಿರುವ ವೆಸ್ಟ್ ಇಂಡೀಸ್ ನ ಹೊಡೆಬಡಿಯ ...

news

ಮೊಹಾಲಿ ಕ್ರಿಕೆಟ್ ಮೈದಾನದಿಂದ ಪಾಕ್ ಕ್ರಿಕೆಟಿಗರ ಭಾವಚಿತ್ರ ಕಿತ್ತು ಹಾಕಿದ ಸಿಬ್ಬಂದಿ

ಮೊಹಾಲಿ: ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತ-ಪಾಕಿಸ್ತಾನ ನಡುವೆ ಎಲ್ಲಾ ರೀತಿಯ ಬಾಂಧವ್ಯ ಹದಗೆಟ್ಟು ...