ಪಿವಿ ಸಿಂಧು, ಜೋಶ್ನಾ ಚಿನ್ನಪ್ಪರನ್ನು ಸಾನಿಯಾ ಮಿರ್ಜಾ ‘ಆಂಟಿ’ ಎಂದಿದ್ದೇಕೆ ಗೊತ್ತಾ?!

ಹೈದರಾಬಾದ್, ಶುಕ್ರವಾರ, 30 ನವೆಂಬರ್ 2018 (09:13 IST)

ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಸ್ಕ್ವಾಶ್ ತಾರೆ ಜೋಶ್ನಾ ಚಿನ್ನಪ್ಪರನ್ನು ಟೆನಿಸ್ ತಾರೆ ಸಾನಿಯಾ ಮಿರ್ಜಾ ‘ಆಂಟಿ’ ಎಂದು ಕಾಲೆಳೆದಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?


 
ಈ ಇಬ್ಬರೂ ತಾರೆಯರು ಸಾನಿಯಾ ಮನೆಗೆ ಅವರ ಪುತ್ರ ಇಝಾನ್ ನನ್ನು ನೋಡಲು ಆಗಮಿಸಿದ್ದರು. ಈ ವೇಳೆ ಇಬ್ಬರೊಂದಿಗೆ ಫೋಟೋ ತೆಗೆಸಿಕೊಂಡ ಸಾನಿಯಾ ಅದನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿ ‘ಬೇಬಿ ಇಝಾನ್ ನನ್ನು ನೋಡಲು ಬಂದ ಸಿಂಧು ಆಂಟಿ ಮತ್ತು ಆಂಟಿಗೆ ಧನ್ಯವಾದ’ ಎಂದು ತಮಾಷೆಯಾಗಿ ಬರೆದುಕೊಂಡಿದ್ದರು.
 
ಇದಕ್ಕೆ ಸರಿಯಾಗಿಯೇ ಪ್ರತಿಕ್ರಿಯಿಸಿದ ಸಿಂಧು ‘ವಾವ್.. ತುಂಬಾ ಕ್ಯೂಟ್ ಆಗಿದೆ ಹೆಸರು ಸಾನಿಯಾ ಅಮ್ಮ...! ಇಝಾನ್ ಕೂಡಾ ತುಂಬಾ ಮುದ್ದಾಗಿದ್ದಾನೆ’ ಎಂದು ಕಿಚಾಯಿಸಿದ್ದಾರೆ. ಅಂತೂ ಒಂದೇ ಊರಿನ ಖ್ಯಾತ ಕ್ರೀಡಾಪಟುಗಳು ಈ ರೀತಿ ತಮಾಷೆ ಮಾಡಿಕೊಂಡಿರುವುದನ್ನು ನೋಡಿ ಫಾಲೋವರ್ ಗಳೂ ನಕ್ಕು ಎಂಜಾಯ್ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಮಿಥಾಲಿ ರಾಜ್ ಮೇಲೆ ಗಂಭೀರ ಆರೋಪಗಳ ಸುರಿಮಳೆಗೈದ ಕೋಚ್ ರಮೇಶ್ ಪೊವಾರ್

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ವಿವಾದ ತಾರಕಕ್ಕೇರಿದ್ದು, ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಮೇಲೆ ...

news

ಸೈನಾ ನೆಹ್ವಾಲ್ ಮದುವೆಯ ಆಹ್ವಾನ ಪತ್ರಿಕೆ ಈಗ ವೈರಲ್

ಹೈದರಾಬಾದ್: ಸೆಲೆಬ್ರಿಟಿಗಳೆಲ್ಲಾ ಒಬ್ಬರಾದ ಮೇಲೊಬ್ಬರಂತೆ ಮದುವೆಯಾಗುತ್ತಲೇ ಇದ್ದು, ಅಭಿಮಾನಿಗಳಿಗೆ ...

news

ಕೆಎಲ್ ರಾಹುಲ್ ಮೇಲೆ ಸಿಟ್ಟಿಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾಕ್ಕೆ ದೊಡ್ಡ ತಲೆನೋವು ಎಂದರೆ ಕೆಎಲ್ ರಾಹುಲ್. ಏನೇ ...

news

ರಣಜಿ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಮೊದಲ ಗೆಲುವಿನ ಅವಕಾಶ

ಮೈಸೂರು: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಗೆಲುವಿನ ಉತ್ಸಾಹದಲ್ಲಿ ...