ಪುಲ್ವಾಮಾ ದಾಳಿ ವಿಚಾರದಲ್ಲಿ ತಮ್ಮನ್ನು ಟ್ರೋಲ್ ಮಾಡಿದವರಿಗೆ ಸುದೀರ್ಘ ಪತ್ರ ಬರೆದ ಸಾನಿಯಾ ಮಿರ್ಜಾ

ನವದೆಹಲಿ, ಸೋಮವಾರ, 18 ಫೆಬ್ರವರಿ 2019 (09:10 IST)

ನವದೆಹಲಿ: ಪುಲ್ವಾಮಾದಲ್ಲಿ ಪಾಕ್ ಪ್ರೇರಿತ ಉಗ್ರರು ಭಾರತೀಯ ಯೋಧರ ಮೇಲೆ ದಾಳಿ ನಡೆಸಿದ ಕೃತ್ಯ ತಿಳಿಯುತ್ತಿದ್ದಂತೇ ಪಾಕಿಸ್ತಾನ ಕ್ರಿಕೆಟಿಗನ ಪತ್ನಿಯೂ ಆಗಿರುವ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ಟ್ವಿಟರ್ ನಲ್ಲಿ ಟ್ರೋಲ್ ಮಾಡಲಾಗಿತ್ತು.


 
ಸಾನಿಯಾ ತಕ್ಷಣವೇ ಟ್ವಿಟರ್ ನಲ್ಲಿ ಘಟನೆ ಬಗ್ಗೆ ಟ್ವೀಟ್ ಮಾಡಲಿಲ್ಲ ಎಂಬುದು ಟ್ರೋಲಿಗರ ಆರೋಪ. ಇದೀಗ ತಮ್ಮನ್ನು ಟ್ರೋಲ್ ಮಾಡಿದವರಿಗೆ ಸುದೀರ್ಘ ಪತ್ರ ಬರೆದು ಸಾನಿಯಾ ತಿರುಗೇಟು ನೀಡಿದ್ದಾರೆ.
 
ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂದು ಟ್ವೀಟ್ ಮಾಡಿರುವ ಸಾನಿಯಾ ಅದರ ಜತೆಗೆ ನಾನು ಘಟನೆ ನಡೆದ ತಕ್ಷಣ ಖಂಡಿಸಿ ಹೇಳಿಕೆ ನೀಡಲಿಲ್ಲ ಎಂದ ಮಾತ್ರಕ್ಕೆ ನನಗೆ ಆ ಘಟನೆ ಬಗ್ಗೆ ಖೇದವಿಲ್ಲ, ಸಂವೇದನೆ ಇಲ್ಲ ಎಂದರ್ಥವಲ್ಲ ಎಂದಿದ್ದಾರೆ.
 
ನಮ್ಮ ಭಾವನೆಗಳು ಸಾರ್ವಜನಿಕವಾಗಿ ಹೇಳಿದರೆ ಮಾತ್ರ ನಮಗೆ ದೇಶಭಕ್ತಿಯಿದೆ ಎಂದರ್ಥವಲ್ಲ ಎಂದಿರುವ ಸಾನಿಯಾ ಫೆಬ್ರವರಿ 14 ಎಂಬುದು ದೇಶದ ಇತಿಹಾಸದಲ್ಲೇ ಕರಾಳ ದಿನವಾಗಿ ಹೋಯಿತು. ಇಂತಹ ದಿನ ಮತ್ತೆ ಮರುಕಳಿಸದಿರಲಿ ಎಂದು ಪ್ರಾರ್ಥಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಸೆಹ್ವಾಗ್ ನಂತರ ಪುಲ್ವಾಮಾ ಹುತಾತ್ಮ ಯೋಧರಿಗೆ ಈ ರೀತಿ ನೆರವಾದ ಶಿಖರ್ ಧವನ್

ನವದೆಹಲಿ: ಪುಲ್ವಾಮಾದಲ್ಲಿ ಉಗ್ರರ ಪೈಶಾಚಿಕ ಕೃತ್ಯದಿಂದ ಪ್ರಾಣ ತ್ಯಾಗ ಮಾಡಿದ ಭಾರತೀಯ ಯೋಧರ ಕುಟುಂಬಗಳಿಗೆ ...

news

ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಟೀಂ ಇಂಡಿಯಾ ಆಡುವಂತಿಲ್ಲ!

ನವದೆಹಲಿ: ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಪಾಕ್ ಪ್ರೇರಿತ ಉಗ್ರರ ದಾಳಿಯ ನಂತರ ಉಭಯ ದೇಶಗಳ ನಡುವಿನ ...

news

ಇಂಥಾ ವಿಕೆಟ್ ಕೀಪರ್ ನೋಡಿಯೇ ಇರಲಿಲ್ಲ: ಧೋನಿ ಬಗ್ಗೆ ಕುಲದೀಪ್ ಯಾದವ್ ಹೇಳಿದ್ದು ಹೀಗೆ!

ಮುಂಬೈ: ವಿಶ್ವದ ಶ್ರೇಷ್ಠ ವಿಕೆಟ್ ಕೀಪರ್ ಗಳಲ್ಲಿ ಒಬ್ಬರೆನಿಸಿಕೊಂಡ ಎಂಎಸ್ ಧೋನಿ ಚಾಣಕ್ಷ್ಯತನದ ಬಗ್ಗೆ ...

news

ಪುಲ್ವಾಮಾ ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸಕ್ಕೆ ವೀರೇಂದ್ರ ಸೆಹ್ವಾಗ್ ನೆರವು

ನವದೆಹಲಿ: ಪುಲ್ವಾಮಾದಲ್ಲಿ ಜೈಶೆ ಉಗ್ರರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಭಾರತೀಯ ಯೋಧರ ಮಕ್ಕಳ ...