ಟೋಕಿಯೋ: ಮಹಿಳೆಯರ ಟೆನಿಸ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಲಿಗೆ ಇದೇ ಕೊನೆಯ ಒಲಿಂಪಿಕ್ ಆಗುವ ಸಾಧ್ಯತೆಯಿದೆ.34 ವರ್ಷದ ಸಾನಿಯಾ ಈ ಬಾರಿಯ ಒಲಿಂಪಿಕ್ಸ್ ನಲ್ಲಿ 9 ನೇ ಶ್ರೇಯಾಂಕಿತೆ ಅಂಕಿತಾ ರೈನಾ ಜೊತೆ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಿ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದಾರೆ. ಮುಂದಿನ ಒಲಿಂಪಿಕ್ಸ್ 2024 ರಲ್ಲಿ ನಡೆಯಲಿದ್ದು, ಅಲ್ಲಿಯವರೆಗೆ ಸಾನಿಯಾ ಆಡುವುದು ಅನುಮಾನ.ಮಗುವಾದ ಮೇಲಂತೂ ಸಾನಿಯಾ ಟೆನಿಸ್ ಕಣಕ್ಕಿಳಿದಿದ್ದೇ ಅಪರೂಪ.