ತನಗೆಂಥಾ ಮಗು ಬೇಕು ಎಂದು ಬಹಿರಂಗಪಡಿಸಿದ ಸಾನಿಯಾ ಮಿರ್ಜಾ

ಹೈದರಾಬಾದ್, ಮಂಗಳವಾರ, 2 ಅಕ್ಟೋಬರ್ 2018 (06:41 IST)

ಹೈದರಾಬಾದ್: ಮುಂದಿನ ತಿಂಗಳು ಚೊಚ್ಚಲ ಮಗುವಿಗೆ ಜನ್ಮ ನೀಡಲಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮಗೆ ಹೆಣ್ಣು ಮಗು ಬೇಕೋ ಗಂಡು ಮಗು ಬೇಕೋ ಎಂದು ಹೇಳಿದ್ದಾರೆ.
 
‘ಎಲ್ಲಾ ಅಮ್ಮಂದಿರಂತೆ ನಾನೂ ನನ್ನ ಮಗು ಅದು ಬಯಸಿದಂತೆ ಸಾಧನೆ ಮಾಡಲಿ ಎಂದು ಆಶಿಸುತ್ತೇನೆ. ಅದು ಎಂತಹದದ್ದೇ ಕನಸಾಗಿರಲಿ, ಅದರ ಬೆನ್ನೇರಿ ಅದು ಸಾಧನೆ ಮಾಡಲಿ ಎಂದು ಬಯಸುತ್ತೇನೆ’ ಎಂದು ಸಾನಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
 
ಹಾಗಿದ್ದರೆ ನಿಮಗೆ ಗಂಡು ಮಗು ಇಷ್ಟವೋ, ಹೆಣ್ಣು ಮಗು ಆಗಬೇಕು ಎಂದು ಬಯಸುತ್ತೀರೋ ಎಂದು ಕೇಳಿದ್ದಕ್ಕೆ ‘ಗಂಡಾಗಲಿ, ಹೆಣ್ಣಾಗಲಿ ಆರೋಗ್ಯವಂತ ಮಗುವಾಗಲಿ ಎಂದು ಬಯಸುತ್ತೇನೆ. ಕೆಲವರಿಗೆ ಮಗು ಗಂಡೋ, ಹೆಣ್ಣೋ ಎಂಬುದೇ ದೊಡ್ಡ ಚಿಂತೆಯಾಗಿರುತ್ತದೆ. ಆದರೆ ಯಾವ ಮಗು ಎನ್ನುವುದಕ್ಕಿಂತ ಅದು ನನ್ನ ಮಗು ಎನ್ನುವುದೇ ನನಗೆ ಮುಖ್ಯ’ ಎಂದು ಸಾನಿಯಾ ಭಾವುಕರಾಗಿ ಹೇಳಿಕೊಂಡಿದ್ದಾರೆ. ಅಂದ ಹಾಗೆ ನವಂಬರ್ ಮೊದಲ ವಾರದಲ್ಲಿ ಸಾನಿಯಾ ಹೆರಿಗೆಯಾಗಲಿದೆಯಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಕರುಣ್ ನಾಯರ್ ಗೆ ಕೊಕ್ ಕೊಟ್ಟಿದ್ದಕ್ಕೆ ಬಿಸಿಸಿಐ ಆಯ್ಕೆ ಸಮಿತಿಯ ಸಮಜಾಯಿಷಿ ಏನು ಗೊತ್ತಾ?

ಮುಂಬೈ: ಇಂಗ್ಲೆಂಡ್ ಸರಣಿಯಲ್ಲಿ ಆಡುವ ಬಳಗದಲ್ಲಿದ್ದೂ ಅವಕಾಶ ಸಿಗಲಿಲ್ಲ. ಇದೀಗ ತವರಿನಲ್ಲಿ ನಡೆಯಲಿರುವ ...

news

ಇಂಗ್ಲೆಂಡ್ ಸರಣಿ ಸೋಲಿಗೆ ಕೋಚ್ ರವಿಶಾಸ್ತ್ರಿ ನೀಡಿದ ಪಿಳ್ಳೆ ನೆವ ಏನು ಗೊತ್ತಾ?!

ಮುಂಬೈ: ಇಂಗ್ಲೆಂಡ್ ನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಹೀನಾಯವಾಗಿ ಸೋತಿದ್ದಕ್ಕೆ ಬಿಸಿಸಿಐ ವಿವರಣೆ ...

news

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಕರ್ನಾಟಕದ ಕುಚಿಕು ಗೆಳೆಯರು

ಬೆಂಗಳೂರು: ಕೊನೆಗೂ ಕನ್ನಡಿಗ ಮಯಾಂಕ್ ಅಗರ್ವಾಲ್ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಎಷ್ಟೋ ದಿನಗಳಿಂದ ...

news

ಏಷ್ಯಾ ಕಪ್ ಗೆದ್ದರೂ ಇದು ಮಾತ್ರ ರೋಹಿತ್ ಶರ್ಮಾಗೆ ಮರೀಚಿಕೆಯಾಯಿತು!

ಮುಂಬೈ: ಏಷ್ಯಾ ಕಪ್ ನಲ್ಲಿ ಶಾಂತ ಸ್ವಭಾವದ ನಾಯಕತ್ವದಿಂದ ಮಿಂಚಿದ ರೋಹಿತ್ ಶರ್ಮಾಗೆ ಟೆಸ್ಟ್ ಕ್ರಿಕೆಟ್ ...