ಪುತ್ರನನ್ನು ಬಿಟ್ಟು ಟ್ರೈನಿಂಗ್ ಶುರು ಮಾಡಿಕೊಂಡ ಸಾನಿಯಾ ಮಿರ್ಜಾ

ಹೈದರಾಬಾದ್, ಗುರುವಾರ, 7 ಫೆಬ್ರವರಿ 2019 (09:23 IST)

ಹೈದರಾಬಾದ್: ಗರ್ಭಿಣಿಯಾದ ಬಳಿಕ ಟೆನಿಸ್ ಕೋರ್ಟ್ ನಿಂದ ದೂರವೇ ಉಳಿದಿದ್ದ ಸಾನಿಯಾ ಮಿರ್ಜಾ ಇದೀಗ ಕಮ್ ಬ್ಯಾಕ್ ಮಾಡಲು ತಯಾರಿ ನಡೆಸುತ್ತಿದ್ದಾರೆ.


 
ಇದರ ಮೊದಲ ಹಂತವಾಗಿ ತಮ್ಮ ಫಿಟ್ನೆಸ್ ಕಾಯ್ದುಕೊಳ್ಳಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಜಿಮ್ ನಲ್ಲಿ ಬೆವರು ಹರಿಸುತ್ತಿರುವ ಸಾನಿಯಾ ಶೀಘ್ರದಲ್ಲೇ ತೂಕ ಇಳಿಸಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.
 
ಮುಂಬರುವ ಯುಎಸ್ ಓಪನ್ ಟೆನಿಸ್ ವೇಳೆಗೆ ಫಿಟ್ ಆಗಿ ಮತ್ತೆ ಟೆನಿಸ್ ಅಂಕಣಕ್ಕೆ ಇಳಿಯಲು ಸಾನಿಯಾ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಪುತ್ರ ಇಝಾನ್ ನನ್ನು ಮನೆಯಲ್ಲೇ ಬಿಟ್ಟು ಜಿಮ್ ನಲ್ಲಿ ಬೀಡುಬಿಟ್ಟಿದ್ದಾರೆ.
 
ಮದುವೆ, ಮಕ್ಕಳು ಎಂಬುದು ಒಬ್ಬ ಹೆಣ್ಣಿನ ವೃತ್ತಿಗೆ ತೊಡಕಾಗಬಾರದು. ಅದು ಜೀವನದ ಒಂದು ಭಾಗ. ಇದೂ ಒಂದು ಭಾಗ ಎಂದು ಇತ್ತೀಚೆಗಷ್ಟೇ ಸಾನಿಯಾ ಹೇಳಿಕೊಂಡಿದ್ದರು. ಇದೀಗ ನುಡಿದಂತೆ ಮಾಡುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಹಾರ್ದಿಕ್ ಪಾಂಡ್ಯ-ಕೆಎಲ್ ರಾಹುಲ್ ಬಗ್ಗೆ ಅನಿಲ್ ಕುಂಬ್ಳೆ ಹೇಳಿದ್ದೇನು?

ಮುಂಬೈ: ಮಹಿಳೆಯರ ಬಗ್ಗೆ ಖಾಸಗಿ ಶೋನಲ್ಲಿ ಅಸಭ್ಯ ಕಾಮೆಂಟ್ ಮಾಡಿ ಪ್ರಕರಣ ದಾಖಲಾಗಿರುವ ಕ್ರಿಕೆಟಿಗರಾದ ...

news

ಭಾರತ-ನ್ಯೂಜಿಲೆಂಡ್ ಟಿ20: ಹೀನಾಯ ಸೋಲು ಕಂಡ ಟೀಂ ಇಂಡಿಯಾ

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಅತಿಥೇಯ ...

news

ಭಾರತ-ನ್ಯೂಜಿಲೆಂಡ್ ಟಿ20: ನ್ಯೂಜಿಲೆಂಡ್ ರನ್ ಮಳೆಯಲ್ಲಿ ಕೊಚ್ಚಿ ಹೋದ ಟೀಂ ಇಂಡಿಯಾ

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಅತಿಥೇಯ ...

news

ಭಾರತ-ನ್ಯೂಜಿಲೆಂಡ್ ಟಿ20: ಟೀಂ ಇಂಡಿಯಾದಲ್ಲಿ ಇಂದು ಸಹೋದರರ ಕಮಾಲ್!

ವೆಲ್ಲಿಂಗ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ...