ಹೈದರಾಬಾದ್: ಬಾಲಿವುಡ್ ತಾರೆ ನೇಹಾ ದುಪಿಯಾ ಗರ್ಭಿಣಿ ಎನ್ನುವ ಸುದ್ದಿ ತಿಳಿದು ಸ್ವತಃ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವೀಟ್ ಮೂಲಕ ಶುಭಕೋರಿದ್ದಾರೆ.ಆದರೆ ಸಾನಿಯಾ ಶುಭ ಕೋರಿದ ರೀತಿ ನೆಟ್ಟಿಗರು ಅಪಾರ್ಥ ಮಾಡಿಕೊಳ್ಳುವಂತಾಗಿದೆ. ಇನ್ನು ಕೆಲವರು ಸಾನಿಯಾ ಟ್ವೀಟ್ ನಲ್ಲಿ ಬರೆದಿರುವುದನ್ನು ನೋಡಿ ತಮಾಷೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಸಾನಿಯಾ ಏನೆಂದು ಬರೆದುಕೊಂಡಿದ್ದರು ಗೊತ್ತಾ?ವಾವ್...ನಾವಿಬ್ಬರೂ ಒಂದೇ ಸಮಯದಲ್ಲಿ ಒಂದನ್ನೇ ಮಾಡುತ್ತಿದ್ದೇವೆ ಎಂದು ಯಾರಿಗೆ ಗೊತ್ತಿತ್ತು? ನಿಮಗಿಬ್ಬರಿಗೂ ಅಭಿನಂದನೆಗಳು