ಭಾರತೀಯ ಯೋಧರ ಬಗ್ಗೆ ಟ್ವೀಟ್ ಮಾಡಬೇಕು ಅನಿಸಿಲ್ವಾ? ಟ್ರೋಲ್ ಆದ ಸಾನಿಯಾ ಮಿರ್ಜಾ

ನವದೆಹಲಿ, ಶನಿವಾರ, 16 ಫೆಬ್ರವರಿ 2019 (09:27 IST)

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಯೋಧರ ಬಲಿದಾನದ ಬಗ್ಗೆ ಒಂದೇ ಒಂದು ಟ್ವೀಟ್ ಮಾಡದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದ್ದಾರೆ.


 
ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ವಿವಾಹವಾಗಿರುವ ಸಾನಿಯಾ ಆಗಾಗ ಭಾರತ-ಪಾಕಿಸ್ತಾನ ವಿಚಾರಕ್ಕೆ ಟ್ರೋಲ್ ಗೊಳಗಾಗುತ್ತಲೇ ಇರುತ್ತಾರೆ. ಆದರೆ ಈ ಬಾರಿ ಅವರು ಯೋಧರ ಹತ್ಯೆ ಬಗ್ಗೆ ಮಾತನಾಡದೇ ತಮ್ಮ ತಂಗಿ ಆನಮ್ ಮಿರ್ಜಾ ಫ‍್ಯಾಶನ್ ಡಿಸೈನ್ ಮಾಡಿರುವದರ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ಟ್ವಿಟರಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
 
ಪುಲ್ವಾಮದಲ್ಲಿ ಅಷ್ಟೊಂದು ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಅವರ ಬಗ್ಗೆ ನಿಮಗೆ ಮಾತನಾಡಬೇಕು ಎಂದು ಅನಿಸಲೇ ಇಲ್ವಾ? ಎಂದು ಸಾನಿಯಾರನ್ನು ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ. ಟ್ರೋಲ್ ನಂತರ ಎಚ್ಚೆತ್ತುಕೊಂಡ ಸಾನಿಯಾ ಯೋಧರ ಬಲಿದಾನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಇದೇ ತಪ್ಪು ಮಾಡಿ ಕೊನೆಗೆ ಟ್ರೋಲ್ ಆದ ಬಳಿಕ ತಿದ್ದಿಕೊಂಡಿದ್ದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ, ಕೊಹ್ಲಿ ಪಾಕಿಸ್ತಾನ ಕ್ರಿಕೆಟ್ ಲೀಗ್ ನಲ್ಲಿ ಯಾಕೆ ಆಡಲ್ಲ ಗೊತ್ತಾ?!

ನವದೆಹಲಿ: ಭಾರತದಲ್ಲಿ ಐಪಿಎಲ್ ಕ್ರೀಡಾಕೂಟ ಇರುವಂತೆ ಪಾಕಿಸ್ತಾನ ಕೂಡಾ ಪಾಕ್ ಕ್ರಿಕೆಟ್ ಲೀಗ್ ಪ್ರತೀ ವರ್ಷ ...

news

ಇದ್ದಕ್ಕಿದ್ದಂತೆ ಬಂದ ಮದುವೆ ಸುದ್ದಿಗೆ ಹಾರ್ದಿಕ್ ಪಾಂಡ್ಯ ಗೆಳತಿ ಹೇಳಿದ್ದೇನು ಗೊತ್ತಾ?

ಮುಂಬೈ: ಕೆಲವು ದಿನಗಳ ಹಿಂದೆ ಮಹಿಳೆಯರ ಮೇಲೆ ಅಸಭ್ಯ ಕಾಮೆಂಟ್ ಮಾಡಿ ಸುದ್ದಿಯಾಗಿದ್ದ ಹಾರ್ದಿಕ್ ಪಾಂಡ್ಯ ...

news

ಆಸ್ಟ್ರೇಲಿಯಾ ಸರಣಿಗೆ ಟೀಂ ಇಂಡಿಯಾ ಆಯ್ಕೆ: ಕೊಹ್ಲಿ, ಕೆಎಲ್ ರಾಹುಲ್ ವಾಪಸ್

ಮುಂಬೈ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಪ್ರಕ್ರಿಯೆ ...

news

ಹುತಾತ್ಮ ಯೋಧರನ್ನು ಸ್ಮರಿಸದೇ ಪ್ರಮೋಷನಲ್ ಟ್ವೀಟ್ ಮಾಡಿದ ವಿರಾಟ್ ಕೊಹ್ಲಿಗೆ ಮಂಗಳಾರತಿ!

ನವದೆಹಲಿ: ಪುಲ್ವಾಮಾದಲ್ಲಿ ನಿನ್ನೆ ಉಗ್ರರು ಭಾರತೀಯ ಯೋಧರ ಮೇಲೆ ನಡೆಸಿದ ಪೈಶಾಚಿಕ ಕೃತ್ಯಕ್ಕೆ ದೇಶವೇ ...