Widgets Magazine

ಭಾರತೀಯ ಯುವತಿಯನ್ನು ವಿವಾಹವಾಗುತ್ತಿರುವ ಪಾಕ್ ಕ್ರಿಕೆಟಿಗನನ್ನು ಟ್ರೋಲ್ ಮಾಡಿದ ಸಾನಿಯಾ ಮಿರ್ಜಾ

ಹೈದರಾಬಾದ್| Krishnaveni K| Last Modified ಬುಧವಾರ, 21 ಆಗಸ್ಟ್ 2019 (09:27 IST)
ಹೈದರಾಬಾದ್: ಪಾಕ್‍ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ವಿವಾಹವಾಗಿದ್ದಕ್ಕೆ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಲವು ಸಂದರ್ಭದಲ್ಲಿ ಟ್ರೋಲ್ ಆಗಿದ್ದರು. ಈಗ ಮತ್ತೊಬ್ಬ ಪಾಕ್ ಕ್ರಿಕೆಟಿಗ ಹಸನ್ ಅಲಿ ಭಾರತೀಯ ಮೂಲದ ಯುವತಿಯನ್ನು ವಿವಾಹವಾಗಿದ್ದಾರೆ.
 

ಹೀಗಾಗಿ ಅಲಿಗೆ ವಿಶ್ ಮಾಡುವ ನೆಪದಲ್ಲಿ ಸಾನಿಯಾ ಮಿರ್ಜಾ ಹಸನ್ ಅಲಿಯನ್ನು ಟ್ರೋಲ್ ಮಾಡಿದ್ದಾರೆ. ಶೊಯೇಬ್ ಮಲಿಕ್ ರಿಂದಾಗಿ ಪಾಕ್ ಕ್ರಿಕೆಟಿಗರ ಜತೆಗೆ ಸಾನಿಯಾಗೆ ಉತ್ತಮ ಸ್ನೇಹ ಸಂಬಂಧವಿದೆ. ಇದೇ ಸ್ನೇಹದಿಂದ ಹಸನ್ ಅಲಿ ಕಾಲೆಳೆದಿದ್ದಾರೆ ಸಾನಿಯಾ.
 
‘ಕಂಗ್ರಾಜ್ಯುಲೇಷನ್ ಹಸನ್. ನಿಮಗಿಬ್ಬರಿಗೂ ಜೀವನಪೂರ್ತಿ ಖುಷಿ, ಪ್ರೀತಿ ಇರಲಿ ಎಂದು ಹಾರೈಸುತ್ತೇನೆ. ಈ ಬಾರಿ ನಂದೋಸ್ ಗಿಂತ ಹೆಚ್ಚು ಟ್ರೀಟ್ ಕೊಡಿಸಬೇಕು ನೀನು’ ಎಂದು ಸಾನಿಯಾ ಕಾಳೆದಿದ್ದಾರೆ. ಹಸನ್ ಚಿಕನ್ ಪ್ರಿಯರಂತೆ. ಇದೇ ಕಾರಣಕ್ಕೆ ನಂದೋಸ್ ರೆಸ್ಟೋರೆಂಟ್ ಗಿಂತ ಜಾಸ್ತಿ ಚಿಕನ್ ಕೊಡಿಸಬೇಕು ಎಂದು ಸಾನಿಯಾ ತಮಾಷೆ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :