ಟೋಕಿಯೋ: ಟೇಬಲ್ ಟೆನಿಸ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಶರತ್ ಕಮಲ್ ಪೋರ್ಚುಗಲ್ ನ ಟಿ. ಅಪೊಲೊನಿಯಾ ವಿರುದ್ಧ 4-2 ಅಂತರದಿಂದ ಗೆಲುವು ಸಾಧಿಸಿದ್ದಾರೆ. Photo Courtesy: Googleಇಂದು ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಶರತ್ ಕಮಲ್ ಮೊದಲ ಸೆಟ್ ನಲ್ಲಿ ಎದುರಾಳಿಯಿಂದ ತೀವ್ರ ಪೈಪೋಟಿ ಎದುರಿಸಿದರು. ಎರಡನೇ ಸೆಟ್ ನಲ್ಲಿ ತಮ್ಮ ಅನುಭವವನ್ನೆಲ್ಲಾ ಒಗ್ಗೂಡಿಸಿ ಆಡಿದ ಶರತ್ ಗೆಲುವು ಸಾಧಿಸಿದರು.ಇದರೊಂದಿಗೆ ಅವರೀಗ ಮೂರನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.