ಪತ್ನಿ ಸಾನಿಯಾ ಮಿರ್ಜಾ ಹೆರಿಗೆ ಸಂದರ್ಭದಲ್ಲಿ ಜತೆಯಾಗಿರಲು ಭಾರತಕ್ಕೆ ಬಂದ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್

ಹೈದರಾಬಾದ್, ಭಾನುವಾರ, 30 ಸೆಪ್ಟಂಬರ್ 2018 (09:13 IST)

ಹೈದರಾಬಾದ್: ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೊದಲ ಮಗುವನ್ನು ಹಡೆಯಲಿದ್ದಾರೆ. ಆದರೆ ಇದಕ್ಕೂ ಮೊದಲು ಪತ್ನಿ ಜತೆ ಇರಲು ಸಾನಿಯಾ ಪತಿ ಶೊಯೇಬ್ ಮಲಿಕ್ ಭಾರತಕ್ಕೆ ಬಂದಿದ್ದಾರೆ.
 
ದುಬೈನಲ್ಲಿ ತಮ್ಮ ದೇಶ ಪಾಕಿಸ್ತಾನದ ಪರ ಏಷ್ಯಾ ಕಪ್ ಕ್ರಿಕೆಟ್ ಆಡುತ್ತಿದ್ದ ಶೊಯೇಬ್ ಇದೀಗ ಟೂರ್ನಮೆಂಟ್ ಮುಗಿಸಿ ನೇರವಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ಹೆರಿಗೆಗೆ ಮೊದಲು ಕೆಲವು ದಿನ ಪತ್ನಿ ಜತೆ ಸಮಯ ಕಳೆಯಲು ಶೊಯೇಬ್ ಪಾಕ್ ಕ್ರಿಕೆಟ್ ಮಂಡಳಿಯ ಅನುಮತಿ ಪಡೆದು ಬಂದಿದ್ದಾರೆ.
 
ಶೊಯೇಬ್ ದುಬೈನಲ್ಲಿದ್ದಾಗ ಸಾನಿಯಾ ಬೇಗ ಬಾ, ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪತಿ ಬಗ್ಗೆ ಬರೆದುಕೊಂಡಿದ್ದರು. ಅಂತೂ ಹೆರಿಗೆ ವೇಳೆಗೆ ಮಗು, ಪತ್ನಿ ಜತೆ ಇರುವುದಕ್ಕೆ ಶೊಯೇಬ್ ಹೈದರಾಬಾದ್ ಗೆ ಬಂದಿಳಿದಿದ್ದಾರೆ ಎನ್ನಲಾಗಿದೆ. ಅಂದ ಹಾಗೆ ಸಾನಿಯಾ ಹೈದರಾಬಾದ್ ನಲ್ಲೇ ಹೆರಿಗೆ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಅಂಡರ್ 19 ತಂಡದಿಂದ ಹೊರಗುಳಿಯಲಿರುವ ರಾಹುಲ್ ದ್ರಾವಿಡ್

ಮುಂಬೈ: ಟೀಂ ಇಂಡಿಯಾ ಏಷ್ಯಾ ಕಪ್ ಆಡಿದ ಬಳಿಕ ಇದೀಗ ಭಾರತ ಅಂಡರ್ 19 ತಂಡ ಏಷ್ಯಾ ಕಪ್ ಆಡಲಿದೆ. ಆದರೆ ಈ ...

news

ನಾಯಕನಾಗಲು ರೆಡಿ ಎಂದ ರೋಹಿತ್ ಶರ್ಮಾ! ವಿರಾಟ್ ಕೊಹ್ಲಿ ಗತಿಯೇನು?

ದುಬೈ: ಏಷ್ಯಾ ಕಪ್ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾ ಹಂಗಾಮಿ ನಾಯಕ ರೋಹಿತ್ ಶರ್ಮಾ ತಾನು ಸುದೀರ್ಘ ...

news

ನಾನೂ ಧೋನಿಯಂತೆ ಎಂದು ಹೇಳಿದಂತೆ ಮಾಡಿ ತೋರಿಸಿದ ರೋಹಿತ್ ಶರ್ಮಾ

ದುಬೈ: ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ ರೋಹಿತ್ ಶರ್ಮಾ ನಾನೂ ಧೋನಿಯಂತೆ ಕೂಲ್ ...

news

ಏಷ್ಯಾ ಕಪ್ ಫೈನಲ್ ನಲ್ಲಿ ಧೋನಿ ಮಾಡಿದ ಸ್ಟಂಪ್ ಔಟ್ ವಿವಾದದಲ್ಲಿ

ದುಬೈ: ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಪರ ಶತಕ ಸಿಡಿಸಿ ಮಿಂಚಿದ ಲಿಟನ್ ದಾಸ್ ಸ್ಟಂಪ್ ಔಟ್ ...