ಸಾನಿಯಾ ಮಿರ್ಜಾ ಸೀಮಂತಕ್ಕೆ ಗೈರು ಹಾಜರಾದ ಪತಿ ಶೊಯೇಬ್ ಮಲಿಕ್

ಹೈದರಾಬಾದ್, ಭಾನುವಾರ, 9 ಸೆಪ್ಟಂಬರ್ 2018 (08:57 IST)

ಹೈದರಾಬಾದ್: ಮುಂದಿನ ತಿಂಗಳು ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿರುವ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ಸೀಮಂತದ ಸಂಭ್ರಮದಲ್ಲಿದ್ದಾರೆ.
 
ಸಾನಿಯಾಗೆ ವಿಶಿಷ್ಟ ರೀತಿಯಲ್ಲಿ ಆಕೆಯ ತವರಿನ ಕುಟುಂಬ ಸೀಮಂತ ಕಾರ್ಯಕ್ರಮ ನೆರವೇರಿಸಿದೆ. ಸೀಮಂತ ಎನ್ನುವುದಕ್ಕಿಂತ ಇದನ್ನು ಒಂದು ಪಾರ್ಟಿ ಎಂದರೆ ಅಡ್ಡಿಯಿಲ್ಲ. ಆದರೆ ಸಾನಿಯಾ ಮಾತ್ರ ಬೇಸರದಲ್ಲಿದ್ದರು.
 
ಅದಕ್ಕೆ ಕಾರಣ ಪತಿ ಶೊಯೇಬ್ ಮಲಿಕ್ ಗೈರು ಹಾಜರಾಗಿದ್ದರು. ಪಾಕ್ ಕ್ರಿಕೆಟಿಗರೂ ಆಗಿರುವ ಮಲಿಕ್ ಸದ್ಯಕ್ಕೆ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗಾಗಿ ದುಬೈನಲ್ಲಿದ್ದಾರೆ. ಹೀಗಾಗಿ ಸಾನಿಯಾಗಾಗಿ ಏರ್ಪಡಿಸಿದ್ದ ಪಾರ್ಟಿಗೆ ಬಂದಿರಲಿಲ್ಲ. ಮಿಕ್ಕಂತೆ ಸಾನಿಯಾ ತಂಗಿ ಆನಮ್ ಮಿರ್ಜಾ, ತಂದೆ, ತಾಯಿ ಕುಟುಂಬದವರು, ಸ್ನೇಹಿತರು ಪಾರ್ಟಿಗೆ ಬಂದಿದ್ದರು. ವಿಶೇಷವೆಂದರೆ ಎಲ್ಲರೂ ಒಂದೊಂದು ಪ್ರಾಣಿಯ ವೇಷ ತೊಟ್ಟು ಸಂಭ್ರಮಿಸಿದ್ದರು. ಈ ಸಂತೋಷದ ಕ್ಷಣಗಳನ್ನು ಸಾನಿಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೀಂ ಇಂಡಿಯಾವನ್ನು ಸತಾಯಿಸುತ್ತಿರುವ ಜೋಸ್ ಬಟ್ಲರ್

ದಿ ಓವಲ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ನ ಎರಡನೇ ದಿನ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ...

news

ಕನ್ನಡಿಗ ಕರುಣ್ ನಾಯರ್ ವಿಚಾರದಲ್ಲಿ ವಿವಾದಕ್ಕೀಡಾದ ವಿರಾಟ್ ಕೊಹ್ಲಿ

ದಿ ಓವಲ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯಕ್ಕೆ ಕನ್ನಡಿಗ ಬ್ಯಾಟ್ಸ್ ಮನ್ ಕರುಣ್ ...

news

ಮಾಜಿ ಕ್ರಿಕೆಟಿಗರಿಗೆ ಅವಮಾನ ಮಾಡಿದ ರವಿಶಾಸ್ತ್ರಿಗೆ ಮುಟ್ಟಿನೋಡಿಕೊಳ್ಳು ವಂತೆ ಏಟು ಕೊಟ್ಟ ಸುನಿಲ್ ಗವಾಸ್ಕರ್

ಮುಂಬೈ: ಇಂಗ್ಲೆಂಡ್ ವಿರುದ್ಧ ಸರಣಿ ಸೋತಿದ್ದಕ್ಕೆ ಟೀಂ ಇಂಡಿಯಾವನ್ನು ಟೀಕಿಸಿದ ಮಾಜಿ ಕ್ರಿಕೆಟಿಗರಿಗೆ ...

news

ವಿರಾಟ್ ಕೊಹ್ಲಿ ಇಲ್ಲದಿರುವುದು ಏಷ್ಯಾ ಕಪ್ ನಲ್ಲಿ ನಮಗೆ ಒಳ್ಳೆದೇ ಆಯ್ತು ಎಂದವರು ಯಾರು ಗೊತ್ತಾ?!

ದುಬೈ: ಇಂಗ್ಲೆಂಡ್ ಸರಣಿ ಮುಗಿದ ತಕ್ಷಣ ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ...