ಉಸೇನ್ ಬೋಲ್ಟ್ ಮೀರಿಸಿದ ಶ್ರೀನಿವಾಸ ಗೌಡನಿಗೆ ಕೇಂದ್ರ ಕ್ರೀಡಾ ಸಚಿವರಿಂದ ಭರ್ಜರಿ ಗಿಫ್ಟ್

ಬೆಂಗಳೂರು| Krishnaveni K| Last Modified ಭಾನುವಾರ, 16 ಫೆಬ್ರವರಿ 2020 (09:23 IST)
ಬೆಂಗಳೂರು: ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿ ಸುದ್ದಿಯಾಗಿದ್ದ ಮೂಡಬಿದಿರೆಯ ಕಂಬಳ ಓಟಗಾರ ಶ್ರೀನಿವಾಸ ಗೌಡನಿಗೆ ಈಗ ಅದೃಷ್ಟ ಖುಲಾಯಿಸಿದೆ.

 
ಸಾಧನೆ ವಿಷಯ ಕಿವಿಗೆ ಬೀಳುತ್ತಿದ್ದಂತೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಆತನಿಗೆ ಬೆಂಗಳೂರಿನ ಕ್ರೀಡಾ ತರಬೇತಿ ಕೇಂದ್ರ ಸಾಯ್ ನಲ್ಲಿ ತರಬೇತಿಗೆ ವ್ಯವಸ್ಥೆ ಮಾಡಿದ್ದಾರೆ.
 
ಸೋಮವಾರ ಶ್ರೀನಿವಾಸ್ ಉನ್ನತ ಕೋಚ್ ಗಳ ಸಮ್ಮುಖದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಇದಕ್ಕಾಗಿ ಕ್ರೀಡಾ ಇಲಾಖೆ ವತಿಯಿಂದಲೇ ರೈಲು ಟಿಕೆಟ್ ಕೂಡಾ ಬುಕ್ ಮಾಡಲಾಗಿದೆ. ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ಸಚಿವ ಕಿರಣ್ ರಿಜಿಜು ಆತ ಸಾಮರ್ಥ್ಯ ಸಾಬೀತುಪಡಿಸುತ್ತಾನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :