‘ಪಾಕ್ ಸೊಸೆ’ ಸಾನಿಯಾ ಮಿರ್ಜಾರನ್ನು ರಾಯಭಾರಿ ಸ್ಥಾನದಿಂದ ಕಿತ್ತು ಹಾಕಿ!

ಹೈದರಾಬಾದ್, ಬುಧವಾರ, 20 ಫೆಬ್ರವರಿ 2019 (09:11 IST)

ಹೈದರಾಬಾದ್: ಪುಲ್ವಾಮಾದಲ್ಲಿ ಭಾರತೀಯ ಯೋಧರ ಮೇಲೆ ಉಗ್ರರ ದಾಳಿಯ ನಂತರ ಭಾರತ ಮತ್ತು ಪಾಕ್ ನಡುವಿನ ಸಂಬಂಧ ಮತ್ತಷ್ಟು ಹಳಸಿದ್ದು, ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ಮದುವೆಯಾದ ಸಾನಿಯಾ ಮಿರ್ಜಾ ಮೇಲೆ ಕೆಲವರು ಕೆಂಡಕಾರುತ್ತಿದ್ದಾರೆ.


 
ಪಾಕಿಸ್ತಾನವನ್ನು ಖಂಡಿಸಲಿಲ್ಲ ಎಂದು ಟ್ವಿಟರ್ ನಲ್ಲಿ ಸಾನಿಯಾ ವಿರುದ್ಧ ಟ್ರೋಲ್ ಆದ ಬೆನ್ನಲ್ಲೇ ಇದೀಗ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಎಂಬವರು ‘ಪಾಕ್ ಸೊಸೆ’ಯಾಗಿರುವ ಟೆನಿಸ್ ತಾರೆಯನ್ನು ರಾಜ್ಯದ ರಾಯಭಾರಿ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದ್ದಾರೆ.
 
ವಿವಾದಾತ್ಮಕ ಹೇಳಿಕೆಗಳಿಗೆ ಹೆಸರುವಾಸಿಯಾಗಿರುವ ಶಾಸಕ ರಾಜಾ ಸಿಂಗ್ ವಿಡಿಯೋ ಸಂದೇಶ ಮೂಲಕ ಸಿಎಂ ಚಂದ್ರಶೇಖರ್ ರಾವ್ ಗೆ ಈ ರೀತಿ ಮನವಿ ಮಾಡಿದ್ದಾರೆ. ಭಾರತ ಸರ್ಕಾರ ಪಾಕ್ ಜತೆಗಿನ ಎಲ್ಲಾ ಬಾಂಧವ್ಯ ಕಡಿದುಕೊಳ್ಳುತ್ತಿರುವಾಗ ಪಾಕ್ ಸೊಸೆಯಾಗಿರುವ ಸಾನಿಯಾರನ್ನು ತೆಲಂಗಾಣದ ರಾಯಭಾರಿಯಾಗಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ ಎಂದು ರಾಜಾ ಸಿಂಗ್ ಹೇಳಿಕೊಂಡಿದ್ದಾರೆ. ಸಾನಿಯಾ ಬದಲು ತೆಲಂಗಾಣದ ಬೇರೆ ಕ್ರೀಡಾ  ತಾರೆಯರಾದ ವಿವಿಎಸ್ ಲಕ್ಷ್ಮಣ್, ಪಿವಿ ಸಿಂಧು ಅಥವಾ ಸೈನಾ ನೆಹ್ವಾಲ್ ಅವರಂತಹ ಪ್ರತಿಭೆಯನ್ನು ರಾಯಭಾರಿಯಾಗಿ ನೇಮಿಸಿ ಎಂದು ಅವರು ಆಗ್ರಹಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ನಲ್ಲಿ ಆಡದೇ ಪಾಕ್ ಗೆ ಬುದ್ಧಿ ಕಲಿಸಬೇಕು ಎಂದ ಹರ್ಭಜನ್ ಸಿಂಗ್

ನವದೆಹಲಿ: ಪುಲ್ವಾಮಾದಲ್ಲಿ ಭಾರತೀಯ ಯೋಧರನ್ನು ಹತ್ಯೆಗೈದ ಪಾಕ್ ಪ್ರೇರಿತ ಉಗ್ರರ ಕೃತ್ಯದಿಂದಾಗಿ ಭಾರತ ...

news

ಐಪಿಎಲ್: ಮೊದಲ 17 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ! ಆದರೆ ಷರತ್ತುಗಳು ಅನ್ವಯ!

ಮುಂಬೈ: ಐಪಿಎಲ್ ನ ಈ ವರ್ಷದ ಆವೃತ್ತಿಯ ಮೊದಲ 17 ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದೆ. ಆದರೆ ಇದರಲ್ಲಿ ...

news

ಆದ್ರೂ ಪಾಕಿಸ್ತಾನವನ್ನು ಖಂಡಿಸಿಲ್ವಲ್ಲಾ..? ಸಾನಿಯಾ ಮಿರ್ಜಾ ವಿರುದ್ಧ ಟ್ವಿಟರಿಗರ ಸಿಟ್ಟು

ನವದೆಹಲಿ: ಪುಲ್ವಾಮಾದಲ್ಲಿ ಪಾಕ್ ಪ್ರೇರಿತ ಉಗ್ರರು ಭಾರತೀಯ ಯೋಧರ ಮೇಲೆ ದಾಳಿ ಮಾಡಿದ ಪ್ರಕರಣ ನಡೆದ ...

news

ಹುತಾತ್ಮ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ಧನಸಹಾಯ ಮಾಡಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧರ ಕುಟುಂಬಗಳಿಗೆ ಟೀಂ ...