ಪುರುಷರ ಹಾದಿ ಹಿಡಿದ ಮಹಿಳಾ ಹಾಕಿ ತಂಡ: ಸೆಮಿಫೈನಲ್ ನಲ್ಲಿ ಸೋಲು

ಟೋಕಿಯೋ| Krishnaveni K| Last Modified ಬುಧವಾರ, 4 ಆಗಸ್ಟ್ 2021 (17:12 IST)
ಟೋಕಿಯೋ: ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಗೇರಿದ್ದ ಸೋಲು ಅನುಭವಿಸಿದೆ.
 

ಇದರೊಂದಿಗೆ ಪುರುಷರ ಹಾಕಿ ತಂಡದ ಹಾದಿಯನ್ನೇ ಹಿಡಿದಿದೆ. ಇಂದು ಅರ್ಜೈಂಟೀನಾ ವಿರುದ್ಧ ನಡೆದ ಪಂದ್ಯವನ್ನು ಮಹಿಳೆಯರು 1-2 ಅಂತರದಿಂದ ಸೋತಿದ್ದಾರೆ.
 
ಪುರುಷರ ತಂಡದಂತೆ ಮಹಿಳೆಯರ ತಂಡವೂ ಅಂತಿಮ ಕ್ಷಣದವರೆಗೂ ಎದುರಾಳಿಗಳಿಗೆ ಅತ್ಯುತ್ತಮ ಪೈಪೋಟಿ ನೀಡಿತು. ಮೊದಲಾರ್ಧದಲ್ಲಿ ಸ್ಕೋರ್ 1-1 ರಿಂದ ಸಮಬಲವಾಗಿತ್ತು. ಆದರೆ ಸೆಕೆಂಡ್ ಹಾಫ್ ನಲ್ಲಿ ಅರ್ಜೈಂಟೀನಾ ಒಂದು ಗೋಲು ಗಳಿಸಿ ಮುನ್ನಡೆ ಗಳಿಸಿತು. ಇದುವೇ ಅವರ ಗೆಲುವಿಗೆ ಕಾರಣವಾಯಿತು. ಇದರೊಂದಿಗೆ ಭಾರತ ಮಹಿಳಾ ತಂಡವೂ ಇದೀಗ ಕಂಚಿನ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಆಡಬೇಕಿದೆ.
ಇದರಲ್ಲಿ ಇನ್ನಷ್ಟು ಓದಿ :