ಒಲಿಂಪಿಕ್ಸ್ ಪಂದ್ಯಗಳ ನೇರಪ್ರಸಾರ ಎಲ್ಲಿ? ಯಾವಾಗ?

ಟೋಕಿಯೋ| Krishnaveni K| Last Modified ಗುರುವಾರ, 22 ಜುಲೈ 2021 (09:30 IST)
ಟೋಕಿಯೋ: ಜಪಾನ್ ನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದ ನೇರ ದೃಶ‍್ಯಾವಳಿಗಳನ್ನು ನೀವು ಪ್ರತಿನಿತ್ಯ ನೋಡಬಹುದು.

 
ಡಿಡಿ ಸ್ಪೋರ್ಟ್ಸ್ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ 5 ರಿಂದ ಸಂಜೆ 7 ಗಂಟೆಯವರೆಗೆ ಒಲಿಂಪಿಕ್ಸ್ ಪಂದ್ಯಗಳ ನೇರಪ್ರಸಾರವಿರಲಿದೆ. ಇದಲ್ಲದೆ ದೂರದರ್ಶನ ಮತ್ತು ಆಕಾಶವಾಣಿಯಲ್ಲೂ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗಲಿದೆ ಎಂದು ವಾರ್ತಾ ಮತ್ತು ಪ್ರಸಾರ ಇಲಾಖೆ ಹೇಳಿದೆ.
 
ವಿವಿಧ ವಿಭಾಗಗಳಲ್ಲಿ ನಡೆಯಲಿರುವ ಭಾರತೀಯ ಸ್ಪರ್ಧಿಗಳ ಸಾಧನೆಯನ್ನು ನೇರವಾಗಿ ವೀಕ್ಷಿಸುವ ಅವಕಾಶ ನಿಮ್ಮದಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :