ಕುಸ್ತಿ ಫೈನಲ್ ಗೆ ರವಿಕುಮಾರ್: ಭಾರತಕ್ಕೆ ಖಚಿತವಾಯ್ತು ಮತ್ತೊಂದು ಮೆಡಲ್

ಟೋಕಿಯೋ| Krishnaveni K| Last Modified ಬುಧವಾರ, 4 ಆಗಸ್ಟ್ 2021 (16:55 IST)
ಟೋಕಿಯೋ: ಇಂದು ಭಾರತದ ಪಾಲಿಗೆ ಶುಭ ದಿನವೆಂದರೂ ತಪ್ಪಾಗಲಾರದು. ಒಲಿಂಪಿಕ್ಸ್ ನಲ್ಲಿ ಒಂದೇ ದಿನ ಇಂದು ಎರಡು ಪದಕದ ಸುದ್ದಿ ಭಾರತಕ್ಕೆ ಬಂದಿದೆ.

 
ಬಾಕ್ಸರ್ ಲೊವ್ಲಿನಾ ಕಂಚಿನ ಪದಕ ಗೆದ್ದ ಬೆನ್ನಲ್ಲೇ ಪುರುಷರ 57 ಕೆ.ಜಿ. ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ರವಿ ಕುಮಾರ್ ಫೈನಲ್ ಪ್ರವೇಶಿಸಿದ್ದು, ಪದಕ ಖಾತ್ರಿಪಡಿಸಿದ್ದಾರೆ.
 
ಈ ಮೂಲಕ ರವಿಕುಮಾರ್ ಒಲಿಂಪಿಕ್ ನಲ್ಲಿ ಫೈನಲ್ ತಲುಪಿದ ಎರಡನೇ ಕುಸ್ತಿಪಟು ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಸುಶೀಲ್ ಕುಮಾರ್ ಫೈನಲ್ ನಲ್ಲಿ ಸೆಣಸಾಡಿದ್ದರು. ಗುರುವಾರ ಫೈನಲ್ ಪಂದ್ಯದಲ್ಲಿ ವಿಶ್ವ ನಂ.2 ಕುಸ್ತಿಪಟುವನ್ನು ರವಿಕುಮಾರ್ ಎದುರಿಸಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :