Widgets Magazine

ವಿಜೇಂದರ್ ವೃತ್ತಿಪರ ಬಾಕ್ಸಿಂಗ್ ಶುಭಾರಂಭ: ಚೊಚ್ಚಲ ಪಂದ್ಯದಲ್ಲಿ ಜಯ

ಮ್ಯಾಂಚೆಸ್ಟರ್| guna| Last Modified ಭಾನುವಾರ, 11 ಅಕ್ಟೋಬರ್ 2015 (12:29 IST)
 ಮ್ಯಾಂಚೆಸ್ಟರ್: ವೃತ್ತಿಪರ ಬಾಕ್ಸಿಂಗ್ ಆಡಲು ನಿರ್ಧರಿಸಿದ್ದ ವಿಜೇಂದರ್ ಸಿಂಗ್ ತಮ್ಮ ಚೊಚ್ಚಲ ಪಂದ್ಯದಲ್ಲೇ ಬ್ರಿಟನ್ ಸೋನಿ ವೈಟಿಂಗ್ ಅವರನ್ನು ಮ್ಯಾಂಚೆಸ್ಟರ್ ಅಖಾಡಾದಲ್ಲಿ ಸೋಲಿಸಿ ಶುಭಾರಂಭ ಮಾಡಿದ್ದಾರೆ. ವಿಜೇಂದರ್ ಅವರನ್ನು ಇನ್ನೂ ಕಿಡ್ ಎಂದು ಕರೆದಿದ್ದ ವೈಟಿಂಗ್ ಅವರನ್ನು ಸೋಲಿಸುವ ಪಣ ತೊಟ್ಟಿದ್ದರು. ಆದರೆ ವಿಜೇಂದರ್ ಅವರನ್ನು ನಿರಾಸೆಗೊಳಿಸಿ ನಾಲ್ಕು ಸುತ್ತಿನ ಬಾಕ್ಸಿಂಗ್‌ನಲ್ಲಿ ಟೆಕ್ನಿಕಲ್ ನಾಕ್ ಔಟ್ ಮೂಲಕ ಮೂರನೇ ಸುತ್ತು ಮುಗಿಯಲು ಕೆಲವೇ ಸೆಕೆಂಡುಗಳು ಬಾಕಿವುಳಿದಿದ್ದಾಗ ಜಯಗಳಿಸಿದರು. 
 
ವಿಜೇಂದರ್ ಅವರು ವೈಟಿಂಗ್ ಅವರನ್ನು ಕೆಲವು ಮುಷ್ಠಿಪ್ರಹಾರಗಳು ಮತ್ತು ಚುರುಕಿನ ಪಾದಚಲನೆಯ ಸಂಯೋಜನೆ ಮೂಲಕ ಹಗ್ಗದತ್ತ ದೂಡಿದಾಗ, ರೆಫರಿ ಆಟವನ್ನು ನಿಲ್ಲಿಸಿ ವಿಜೇಂದರ್ ಜಯಶಾಲಿ ಎಂದು ಘೋಷಿಸಿದರು.  ಈ ಜಯ ಲಭಿಸಿದ್ದು ತಮಗೆ ಸಂತೋಷವಾಗಿದೆ. ನಾನು ಶ್ರಮಪಟ್ಟು ದುಡಿದು ಒಂದು ದಿನ ವೃತ್ತಿಪರ ಬಾಕ್ಸಿಂಗ್ ಚಾಂಪಿಯನ್ ಆಗುತ್ತೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ನಾನು ಹೋರಾಟದ ಸಂದರ್ಭದಲ್ಲಿ ನರ್ವಸ್ ಆಗಲಿಲ್ಲ.

ಸೋನಿ ವೈಟಿಂಗ್ ಅವರಿಗೆ ನನ್ನ ಪ್ರಹಾರಗಳ ಮೂಲಕ ಉತ್ತರಿಸಿರುವೆ.  ಅಕ್ಟೋಬರ್ 20ಕ್ಕೆ ಮುಂದಿನ ಫೈಟ್‌ಗೆ ಸಿದ್ದವಾಗುತ್ತೇನೆ ಎಂದು ವಿಜೇಂದರ್ ಹೇಳಿದ್ದಾರೆ. 
 ವೃತ್ತಿಪರ ಬಾಕ್ಸಿಂಗ್ ನನಗೆ ಹೊಸದು. ಆದರೆ ನಾನು ಶ್ರಮಪಟ್ಟು ದುಡಿಯುತ್ತಿದ್ದೇನೆ. ನನ್ನ ವೃತ್ತಿಪರ ಬಾಕ್ಸಿಂಗ್ ಪ್ರಯಾಣದ ಆರಂಭದಲ್ಲಿ ಬೆಂಬಲಿಸಿದ ಅಭಿಮಾನಿಗಳಿಗೆ, ಸ್ನೇಹಿತರಿಗೆ, ಕುಟುಂಬಕ್ಕೆ ಮತ್ತು ಕೋಚ್ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ವಿಜೇಂದರ್ ಹೇಳಿದರು. 



ಇದರಲ್ಲಿ ಇನ್ನಷ್ಟು ಓದಿ :