ರಿಯೊ ಒಲಿಂಪಿಕ್ಸ್‌ಗೆ ಚೊಚ್ಚಲ ಪ್ರವೇಶ ಪಡೆದ ದೀಪಾ ಕರ್ಮಾಕರ್

ನವದೆಹಲಿ| guna| Last Modified ಬುಧವಾರ, 20 ಜುಲೈ 2016 (17:08 IST)
ಭಾರತ ರಿಯೊ ಒಲಿಂಪಿಕ್ಸ್‌ಗೆ ಅತೀ ದೊಡ್ಡ ತಂಡವನ್ನು ಕಳಿಸುತ್ತಿದ್ದು, ಇವರ ಪೈಕಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಡೆದಿರುವ ಅಥ್ಲೀಟ್‌ಗಳು ಸಹ ಇದ್ದಾರೆ. ಇವರ ಪೈಕಿ ಕ್ರೀಡಾಕೂಟದಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧರಾಗಿರುವ ಕೆಲವರತ್ತ ಗಮನಹರಿಸೋಣ.
ಚೊಚ್ಚಲ ಅಥ್ಲೀಟ್‌ಗಳ ಪಟ್ಟಿಯಲ್ಲಿ ದೀಪಾ ಕರ್ಮಾಕರ್ ಟಾಪ್‌ನಲ್ಲಿದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಜಿಮ್ನಾಸ್ಟ್ ಆಗಿದ್ದಾರೆ. 52 ವರ್ಷಗಳ ಬಳಿಕ ಮೆಗಾ ಈವೆಂಟ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯಳಾಗಿದ್ದಾಳೆ. 22 ವರ್ಷದ ಅಥ್ಲೀಟ್ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅಪರೂಪದ ಅಪಾಯಕಾರಿ ಪ್ರೊಡುನೋವಾ ವಾಲ್ಟ್ ಪ್ರಯತ್ನಿಸುವ ಮೂಲಕ ಜಗತ್ತಿಗೆ ಆಘಾತ ಉಂಟುಮಾಡಿದ್ದರು. ಗ್ಲಾಸ್ಗೊನಲ್ಲಿ ಈ ಕಸರತ್ತಿಗಾಗಿ ದೀಪಾ ಕಂಚಿನ ಪದಕ ಗೆದ್ದಿದ್ದರು.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ

ಮೊಬೈಲ್ ಆ್ಯಪ್
ಡೌನ್‌ಲೋಡ್ ಮಾಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :