ಬೆಂಗಳೂರು: ತಾಯಿಯಾದ ನಂತರ ಮೊದಲ ಬಾರಿ ಟೆನಿಸ್ ಅಂಗಣಕ್ಕೆ ಇಳಿಯಲು ಸಜ್ಜಾಗುತ್ತಿರುವ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಅವರಿಗೆ ಪತಿ ಅಲೆಕ್ಸಿ ಒಹಾನಿಯನ್ ಒಂದು ಅಚ್ಚರಿಯ ಉಡುಗೊರೆಯೊಂದನ್ನು ನೀಡಿ ಪ್ರೀತಿಯ ಮಡದಿಯನ್ನು ಆಟಕ್ಕೆ ಸಜ್ಜುಗೊಳಿಸಿದ್ದಾರೆ. ಮಾರ್ಚ್ ಐದರಂದು ನಡೆಯಲಿರುವ ಬಿಎನ್ಪಿ ಪರಿಬಾಸ್ ಓಪನ್ ಟೂರ್ನಿಯಲ್ಲಿ ಸೆರೆನಾ ಭಾಗವಹಿಸಲಿದ್ದಾರೆ. ಈ ಟೂರ್ನಿ ನಡೆಯಲಿರುವ ಕಾಲಿಫ್ನ ಇಂಡಿಯನ್ ವೇಲ್ಸ್ ಟೆನಿಸ್ ಗಾರ್ಡನ್ನಲ್ಲಿ ಮಗುವಿನೊಂದಿಗೆ ಸೆರೆನಾ ಇರುವ ಐದು ಫಲಕಗಳನ್ನು ಒಹಾನಿಯನ್ ಪ್ರದರ್ಶಿಸಿದ್ದಾರೆ. ಇದನ್ನು