ನವದೆಹಲಿ: ಇಂದು ವಿವಾಹ ಜೀವನಕ್ಕೆ ಕಾಲಿಡುತ್ತಿರುವ ಭಾರತದ ಖ್ಯಾತ ಕುಸ್ತಿ ಪಟು ಯೋಗೇಶ್ವರ್ ದತ್ ಕೇವಲ ಒಂದು ರೂಪಾಯಿ ವರದಕ್ಷಿಣೆ ಪಡೆದು ಮಾದರಿಯಾಗಿದ್ದಾಗಿ ನಿನ್ನೆ ಸುದ್ದಿಯಾಗಿತ್ತು. ಆದರೆ ಈ ಒಂದು ರೂಪಾಯಿ ಹಿಂದಿನ ರಹಸ್ಯವೇನೆಂದು ಸ್ವತಃ ಯೋಗೇಶ್ವರ್ ದತ್ ಬಿಚ್ಚಿಟ್ಟಿದ್ದಾರೆ.ನಿಜವಾಗಿ ತಾನು ಒಂದು ರೂಪಾಯಿ ಪಡೆದಿದ್ದು, ವರದಕ್ಷಿಣೆ ಎಂದಲ್ಲ, ಅದು ಶಗುನ್ ರೂಪದಲ್ಲಿ ಪಡೆದಿದ್ದೆನಷ್ಟೆ. ಹರ್ಯಾಣಾದ ಕಾಂಗ್ರೆಸ್ ನಾಯಕನ ಪುತ್ರಿ ಶೀತಲ್ ಜತೆ ವಿವಾಹವಾಗಲಿರುವ ಯೋಗೇಶ್ವರ್ ಒಂದು ರೂಪಾಯಿ ವರದಕ್ಷಿಣೆ