ಕೇಕ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಚಾಕೊಲೇಟ್ ಕೇಕ್ ಅಂದರೆ ಬಾಯಲ್ಲಿ ನೀರು ಬರುತ್ತೆ. ಈ ಬಾರಿ ಕ್ರಿಸ್ಮಸ್ ಪ್ರಯುಕ್ತ ನಿಮ್ಮ ಮನೆಯಲ್ಲಿ ಸ್ಪೆಷಲ್ ಆಗಿ ಚಾಕೊಲೇಟ್ ಕೇಕ್ ಮಾಡಿ. ಮೊದಲು ಒಂದು ಮಧ್ಯಮ ಗಾತ್ರದ ಕುಕ್ಕರ್ ತೆಗೆದುಕೊಳ್ಳಿ. ಅದನ್ನ ಗ್ಯಾಸ್ ಮೇಲೆ ಇಡಿ. ಉರಿ ಸಣ್ಣದಾಗಿರಲಿ. ಅದಕ್ಕೆ ಅರ್ಧ ಕಪ್ ಪುಡಿ ಉಪ್ಪು ಹಾಕಿ. ಪುಡಿ ಉಪ್ಪು ಹಾಕಿದ ಬಳಿಕ ಉಪ್ಪಿನ ಮೇಲೆ ರಂಧ್ರವಿರುವ ಸ್ಟೀಲ್ ತಟ್ಟೆಯಿಂದ