2016 ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟಿ -೨೦ ವಿಶ್ವಕಪ್ ಲಾಂಛನವನ್ನು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮಂಗಳವಾರ ಬಿಡುಗಡೆ ಮಾಡಿದೆ.ಟಿ20 ಟೂರ್ನಿಯ ಶ್ರೇಷ್ಠ ಟೂರ್ನಿ ಇದೇ ಮೊದಲ ಬಾರಿಗೆ ಭಾರತದಲ್ಲಿ ನಡೆಯುತ್ತಿದ್ದು, ವಿಶ್ವಕಪ್ ಬಗ್ಗೆ ಉತ್ಸುಕವಾಗಿದ್ದೇವೆ ಎಂದು ಐಸಿಸಿ ಟ್ವೀಟರ್ನಲ್ಲಿ ತಿಳಿಸಿದೆ.ಬೆಂಗಳೂರು, ಚೆನೈ, ಧರ್ಮಶಾಲಾ, ಮೊಹಾಲಿ, ಮುಂಬೈ, ನಾಗ್ಪುರ ಹಾಗೂ ದೆಹಲಿಯಲ್ಲಿ ಸರಣಿ ಪಂದ್ಯ ನಡೆಯಲಿವೆ. ಇಪ್ಪತ್ತು ವರ್ಷಗಳ ನಂತರ ಕೋಲ್ಕತಾದ ಈಡನ್ ಗಾರ್ಡನ್ನಲ್ಲಿ ಫೈ ನಲ್ ಪಂದ್ಯ ನಡೆಯಲಿದೆ.