ಕ್ರಿಕೆಟ್ ಪ್ರೇಮಿಗಳನ್ನು ಕಾತುರ ಹೆಚ್ಚಿಸುವ ಟಿ-20 ವಿಶ್ವಕಪ್ ಭವಿಷ್ಯ ನಿರ್ಧಾರ ಆಗುವುದಕ್ಕೆ ಇನ್ನೂ ಕೆಲವು ದಿನಗಳವರೆಗೆ ಕಾಯಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್ ನಲ್ಲಿ ನಡೆಸುವ ಸಭೆ ಬಳಿಕವಷ್ಟೇ ಐಪಿಎಲ್ ನ ಮುಂದಿನ ಭವಿಷ್ಯದ ಕುರಿತು ಸ್ಪಷ್ಟವಾದ ನಿರ್ಧಾರ ಹೊರಬೀಳಬಹುದು ಎನ್ನುವುದು ಸಧ್ಯದ ಲೆಕ್ಕಾಚಾರವಾಗಿದೆ.ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ-20 ವಿಶ್ವಕಪ್ ಪಂದ್ಯಾವಳಿ ವೇಳಾಪಟ್ಟಿ ಕುರಿತು ಜೂನ್ ಎರಡನೇ ವಾರದಲ್ಲಿ ಸೂಕ್ತ ತೀರ್ಮಾನ ಪ್ರಕಟಗೊಳ್ಳಲಿದೆ.ಡೆಡ್ಲಿ ಕೊರೊನಾ ವೈರಸ್ ಜಗತ್ತಿನ ಹಲವು ದೇಶಗಳಿಗೆ ಮಾರಕವಾಗಿ