ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ; 1 ಬದಲಾವಣೆ!

ಕೊಲೊಂಬೊ| Ramya kosira| Last Modified ಗುರುವಾರ, 29 ಜುಲೈ 2021 (20:10 IST)
ಕೊಲೊಂಬೊ(ಜು.29): ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ನಿರ್ಣಾಯಕ ಘಟ್ಟ ತಲುಪಿದೆ. ಸರಣಿ 1-1 ಅಂತರದಿಂದ ಸಮಬಲಗೊಂಡಿರುವ ಕಾರಣ ಇಂದಿನ 3ನೇ ಹಾಗೂ ಅಂತಿಮ ಟಿ20 ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಕೊಲೊಂಬೊದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
•ಭಾರತ-ಶ್ರೀಲಂಕಾ ನಡುವಿನ 3ನೇ ಹಾಗೂ ಅಂತಿಮ ಟಿ20
•ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್
•ಪಂದ್ಯ ಗೆದ್ದ ತಂಡಕ್ಕೆ ಖಿ20 ಸರಣಿ
 
ಗಾಯಗೊಂಡಿರುವ ನವದೀಪ್ ಸೈನಿ ಬದಲು ಸಂದೀಪ್ ವಾರಿಯರ್ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ.
 ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 38 ರನ್ ಗೆಲುವು ದಾಖಲಿಸಿತ್ತು. ಕೊರೋನಾ ಕಾರಣ 2ನೇ ಪಂದ್ಯ ಮುಂದೂಡಲಾಗಿತ್ತು. ನಿನ್ನೆ(ಜು.28) ನಡೆದ 2ನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ 4 ವಿಕೆಟ್ ಗೆಲುವು ಕಂಡಿತ್ತು.
 
ಇದರಲ್ಲಿ ಇನ್ನಷ್ಟು ಓದಿ :