ಡ್ರಾಮಾ ಜ್ಯೂನಿಯರ್ಸ್ ಅಚಿಂತ್ಯ ನೀಡಿದ ಭರ್ಜರಿ ನ್ಯೂಸ್

ಬೆಂಗಳೂರು| Krishnaveni K| Last Modified ಮಂಗಳವಾರ, 8 ಜನವರಿ 2019 (10:39 IST)
ಬೆಂಗಳೂರು: ಧಾರವಾಹಿಯಲ್ಲಿ ಪ್ರಸಾರವಾಗುತ್ತಿದ್ದ ಡ್ರಾಮಾ ಜ್ಯೂನಿಯರ್ಸ್ ವೀಕ್ಷಿಸುತ್ತಿದ್ದವರಿಗೆ ಅಚಿಂತ್ಯಾ ಪುರಾಣಿಕ್ ಎಂಬ ಪುಟಾಣಿ ಬಗ್ಗೆ ಗೊತ್ತಿರುತ್ತದೆ. ಈತನನ್ನು ಇಷ್ಟಪಡುವ ಅದೆಷ್ಟೋ ಅಭಿಮಾನಿಗಳು ಈಗ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾನೆ.
 
ಈ ಪುಟಾಣಿ ಈಗ ಪ್ರಹ್ಲಾದನಾಗುತ್ತಿದ್ದಾನೆ! ಜೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಶ್ರೀ ವಿಷ್ಣುದಶಾವತಾರ ಪೌರಾಣಿಕ ಧಾರವಾಹಿಯಲ್ಲಿ ಇನ್ನು, ನರಸಿಂಹಾವತಾರದ ಕತೆ ಆರಂಭವಾಗಲಿದ್ದು, ಅಚಿಂತ್ಯ ಪ್ರಹ್ಲಾದನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
 
ವಿಶೇಷವೆಂದರೆ ಈ ಕತೆಯಲ್ಲಿ ಹಿರಣ್ಯಕಶಿಪು ಪಾತ್ರ ಮುಖ್ಯವಾದುದು. ಈ ಪಾತ್ರವನ್ನು ಹಿರಿ-ಕಿರಿ ತೆರೆಯಲ್ಲಿ ಮಿಂಚಿರುವ ನಿಭಾಯಿಸುತ್ತಿದ್ದಾರೆ. ಈಗಾಗಲೇ ಈ ಗೆಟಪ್ ನಲ್ಲಿರುವ ಇಬ್ಬರ ಫೋಟೋಗಳು ವೈರಲ್ ಆಗಿದ್ದು, ಪ್ರೇಕ್ಷಕರು ಕುತೂಹಲದಿಂದ ಸಂಚಿಕೆಗಾಗಿ ಎದುರು ನೋಡುವಂತೆ ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :