Widgets Magazine

ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಭೂಮಿಕಾ

Bangalore| Rajendra| Last Modified ಶನಿವಾರ, 11 ಫೆಬ್ರವರಿ 2017 (19:27 IST)
ಕಿರುತೆರೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕಾಮನ್ ಮ್ಯಾನ್‍ಗಳಿಗೆ ವೇದಿಕೆ ಕಲ್ಪಿಸಿ, ಜನರನ್ನ ನಗೆಗಡಲಲ್ಲಿ ಮುಳುಗಿಸುವ ಕೆಲಸಕ್ಕೆ ಉದಯ ಕಾಮಿಡಿ ಚಾನಲ್ ಮುಂದಾಗಿದೆ. ಪ್ರತಿದಿನ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಉದಯ ಕಾಮಿಡಿ ಚಾನಲ್‍ನಲ್ಲಿ ಮೂಡಿಬರಲಿರುವ “ಉದಯ ಕಾಮಿಡಿ ಸ್ಟಾರ್” ಎಂಬ ಹೊಸ ಹಾಸ್ಯ ಕಾರ್ಯಕ್ರಮ.
 
ಈ ಕಾರ್ಯಕ್ರಮ ಈಗ ಎಲ್ಲರ ಕೇಂದ್ರಬಿಂದುವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ, ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ಸಾವಿರಾರು ಹಾಸ್ಯ ಕಲಾವಿದರನ್ನು ಆಡಿಷನ್ ಮಾಡಲಾಗಿದ್ದು ಅದರಲ್ಲಿ ಆಯ್ದ 24 ಕಲಾವಿದರಿಗೆ ವೇದಿಕೆ ಕಲ್ಪಿಸಲಾಗಿದೆ.
 
ಇವರು ರಘು ರಾಕೆಟ್ಸ್, ಸಾಧೂ ಸುಲ್ತಾನ್ಸ್, ಚಿಕ್ಕು ಪಟಾಕೀಸ್ ಹಾಗೂ ಶರಣ್ ಶಿಷ್ಯಾಸ್ ಎಂಬ ನಾಲ್ಕು ತಂಡಗಳಾಗಿ ಜನರನ್ನು ರಂಜಿಸಲಿದ್ದಾರೆ. ನಟಿ ಭೂಮಿಕಾ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :