ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರವಾಹಿ ಮತ್ತೆ ಪ್ರೇಕ್ಷಕರ ಟ್ರೋಲ್ ಗೆ ತುತ್ತಾಗಿದೆ. ಈಗ ವಿಲನ್ ಚಂದ್ರಿಕಾ ಬಣ್ಣ ಬಯಲಾಗಿದೆ. ಇನ್ನಾದರೂ ಸೀರಿಯಲ್ ಮುಗಿಸಿ ಎಂದು ಪ್ರೇಕ್ಷಕರು ಗೋಳು ಹೊಯ್ದುಕೊಳ್ಳುತ್ತಿದ್ದಾರೆ.ಇನ್ನೇನು ಐಪಿಎಲ್ ಶುರುವಾಗುತ್ತದೆ. ಅದೂ ಅಗ್ನಿಸಾಕ್ಷಿ ಧಾರವಾಹಿ ಪ್ರಸಾರವಾಗುವ ಎಂಟು ಗಂಟೆ ಹೊತ್ತಿಗೇ ಮ್ಯಾಚ್ ನಡೆಯುತ್ತದೆ. ಐಪಿಎಲ್ ಗೆ ಮೊದಲು ಅಗ್ನಿಸಾಕ್ಷಿ ಮುಗಿದಿಲ್ಲ ಎಂದರೆ ನಮಗೆ ಅಮ್ಮ ರಿಮೋಟ್ ಕೊಡಲ್ಲ ಎಂದು ಕೆಲವು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಗೋಳು