ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿ ಆರು ವರ್ಷ ಪೂರೈಸಿದೆ. ವೀಕ್ಷಕರು ಸಾಮಾಜಿಕ ಜಾಲತಾಣಗಳ ಮೂಲಕ ಈ ಧಾರವಾಹಿಯನ್ನು ನಿಲ್ಲಿಸಿಬಿಡಿ ಎಂದು ಎಷ್ಟೇ ಕೇಳಿಕೊಂಡರೂ ವಾಹಿನಿ ಮಾತ್ರ ಇದನ್ನು ನಿಲ್ಲಿಸುವ ಮೂಡ್ ನಲ್ಲಿರುವಂತೆ ಕಾಣುತ್ತಿಲ್ಲ.ಈಗಾಗಲೇ ನಾಯಕ ವಿಜಯ್ ಸೂರ್ಯ ಬೇರೊಂದು ಧಾರವಾಹಿಗೆ ಹೋಗಿದ್ದರೆ, ವಿಲನ್ ಚಂದ್ರಿಕಾ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದಾರೆ. ನಾಯಕ, ವಿಲನ್ ಧಾರವಾಹಿ ಬಿಟ್ಟು ಹೋದರೂ ಬೇರೆ ಬೇರೆ ಕತೆ ಮಾಡಿಕೊಂಡು ಧಾರವಾಹಿಯನ್ನೂ ಇನ್ನೂ