ಹುಡುಗಿಯರ ಹೃದಯ ಚೂರು ಮಾಡಿದ ‘ಅಗ್ನಿಸಾಕ್ಷಿ’ ಸಿದ್ಧಾರ್ಥ್!

ಬೆಂಗಳೂರು, ಭಾನುವಾರ, 27 ಜನವರಿ 2019 (09:12 IST)

ಬೆಂಗಳೂರು: ಅಗ್ನಿಸಾಕ್ಷಿ ಧಾರವಾಹಿಯ ಗುಳಿ ಕೆನ್ನೆಯ ಹೀರೋ ಸಿದ್ಧಾರ್ಥ್ ಅಲಿಯಾಸ್ ಅದೇ ಧಾರವಾಹಿಯ ಸನ್ನಿಧಿಯನ್ನು ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದರು.


 
ಇವರಿಬ್ಬರೂ ನಿಜ ಜೀವನದಲ್ಲೂ ಪ್ರೇಮಿಗಳು ಎಂದು ಸಾಕಷ್ಟು ಸಲ ಗಾಸಿಪ್ ಬಂದಿತ್ತು. ಅಷ್ಟೇ ಅಲ್ಲದೆ, ಸಾಕಷ್ಟು ಹುಡುಗಿಯರೂ ವಿಜಯ್ ಸೂರ್ಯರನ್ನು ಇಷ್ಟಪಟ್ಟಿದ್ದರು. ಆದರೆ ಇದೀಗ ಸಿದ್ಧಾರ್ಥ್ ಇವರೆಲ್ಲರ ಹೃದಯ ಚೂರು ಮಾಡುವ ಸುದ್ದಿ ಹೇಳಿದ್ದಾರೆ.
 
ಹೌದು. ಇದೇ ವರ್ಷ ಫೆಬ್ರವರಿ 14 ಅಂದರೆ ಪ್ರೇಮಿಗಳ ದಿನದಂದು ವಿಜಯ್ ಸೂರ್ಯ ವಿವಾಹವಾಗುತ್ತಿದ್ದಾರೆ. ಆದರೆ ಸನ್ನಿಧಿಯನ್ನು ಅಂತೂ ಅಲ್ಲ! ವಿಜಯ್ ಕೈ ಹಿಡಿಯಲಿರುವ ಹುಡುಗಿ ಹೆಸರು ಚೈತ್ರ. ಈಕೆ ಮತ್ತು ವಿಜಯ್ ಕುಟುಂಬದವರು ಸುಮಾರು ವರ್ಷಗಳಿಂದ ಸ್ನೇಹಿತರಂತೆ. ಇದೀಗ ಎರಡೂ ಮನೆಯವರು ಒಪ್ಪಿಕೊಂಡು ಈ ಮದುವೆ ಮಾಡುತ್ತಿದ್ದಾರೆ. ಅಂದರೆ ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್.
 
ಅದೇನೇ ಇದ್ದರೂ ವಿಜಯ್ ಈ ಸುದ್ದಿ ಬಹಿರಂಗಪಡಿಸಿದಾಗಿನಿಂದ ಇನ್ ಸ್ಟಾಗ್ರಾಂನ ಅವರ ಅಭಿಮಾನಿ ಗ್ರೂಪ್ ಗಳಲ್ಲಿ, ಹುಡುಗಿಯರು ತಮಗೇ ಸಿಗದ ಹುಡುಗನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದು ಗುಡ್ ನ್ಯೂಸ್ ಅಲ್ಲ, ಬ್ಯಾಡ್ ನ್ಯೂಸ್ ಎನ್ನುತ್ತಿದ್ದಾರೆ. ಕನಿಷ್ಠ ಸನ್ನಿಧಿಯನ್ನಾದರೂ ಮದುವೆಯಾಗಬಹುದಿತ್ತಲ್ಲಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಭಾರತ-ಪಾಕ್ ವಾಘಾ ಗಡಿಗೆ ಹೋಗಿ ಬಂದ್ರು ನಟಿ ಅಮೂಲ್ಯ! (ಫೋಟೋಗಳು)

ಬೆಂಗಳೂರು: ಜಗದೀಶ್ ಅವರನ್ನು ಮದುವೆಯಾದ ಮೇಲೆ ಸಿನಿಮಾದಿಂದ ದೂರವೇ ಇರುವ ನಟಿ ಅಮೂಲ್ಯ ಇದೀಗ ಗಣರಾಜ್ಯೋತ್ಸವ ...

news

ಪುನೀತ್ ರಾಜ್ ಕುಮಾರ್ ನೋಡಿದರೆ ಕಿಚ್ಚ ಸುದೀಪ್ ಗೆ ಈ ವಿಚಾರದಲ್ಲಿ ಹೊಟ್ಟೆ ಕಿಚ್ಚಾಗುತ್ತದಂತೆ!

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಟೀಸರ್ ನೋಡಿ ಮೆಚ್ಚಿಕೊಂಡ ಪುನೀತ್ ರಾಜ್ ಕುಮಾರ್ ಗೆ ಕಿಚ್ಚ ...

news

ಗುಡ್ ನ್ಯೂಸ್ ಕೊಟ್ಟ ಆಂಕರ್ ಅನುಶ್ರೀಗೆ ಸರ್ಪ್ರೈಸ್ ಕೊಟ್ಟ ಸರಿಗಮಪ ವೇದಿಕೆ

ಬೆಂಗಳೂರು: ಜೀ ಕನ್ನಡ ವಾಹಿನಿಯ ಸರಿಗಮಪ ಜನಪ್ರಿಯ ಕಾರ್ಯಕ್ರಮದಲ್ಲಿ ಎಲ್ಲರೂ ಇಷ್ಟಪಟ್ಟು ನೋಡುವ ...

news

ಮುಖ್ಯಮಂತ್ರಿ ಮಗ ಎಂದು ಜನ ಸಿನಿಮಾ ನೋಡಲ್ಲ: ನಿಖಿಲ್ ಕುಮಾರಸ್ವಾಮಿ ಖಡಕ್ ಮಾತು

ಬೆಂಗಳೂರು: ಸೀತಾರಾಮ ಕಲ್ಯಾಣ ಸಿನಿಮಾ ಬಿಡುಗಡೆಗೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ...