ಬೆಂಗಳೂರು: ಅಗ್ನಿಸಾಕ್ಷಿ ಸಿದ್ಧಾರ್ಥ್ ರಿಯಲ್ ಲೈಫ್ ನಲ್ಲಿ ಮದುವೆಯಾಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ. ಆಗಲೇ ಎರಡನೇ ಪತ್ನಿ ಪ್ರತ್ಯಕ್ಷವಾಗಿದ್ದಾಳೆ!ಆದರೆ ಇದು ರಿಯಲ್ ಲೈಫ್ ನಲ್ಲಿ ಅಲ್ಲ. ಧಾರವಾಹಿಯಲ್ಲಿ ಸಿದ್ಧಾರ್ಥ್ ಗೆ ಎರಡನೇ ಹೆಂಡತಿ ಅಂತ ಹೇಳಿಕೊಂಡು ಮಹಿಳೆಯೊಬ್ಬಳು ಮನೆಗೆ ಪ್ರವೇಶ ಮಾಡುತ್ತಾಳೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸಿದ್ಧಾರ್ಥ್ ಗೆ ಐಡಿಯಲ್ ಜೋಡಿ ಎಂದರೆ ಸನ್ನಿಧಿ. ಇವರಿಬ್ಬರೂ ನಿಜ ಜೀವನದಲ್ಲೂ ಒಂದಾಗಬೇಕು ಎಂದು ಅದೆಷ್ಟೋ ಅಭಿಮಾನಿಗಳು ಬಯಸಿದ್ದರು.