ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿ ಮೂಲಕ ಕಿರುತೆರೆ ಲೋಕದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಆರ್ಯವರ್ಧನ್ ಅಲಿಯಾಸ್ ನಟ ಅನಿರುದ್ಧ್ ಗೆ ಇಂದು ಜನ್ಮದಿನದ ಸಂಭ್ರಮ.ಬೆಳ್ಳಿ ತೆರೆಯಲ್ಲಿ ಹೇಳಿಕೊಳ್ಳುವಂತಹ ಬ್ರೇಕ್ ಸಿಗದೇ ಇದ್ದರೂ ಕಿರುತೆರೆಯಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಗೆ ಹೊಸ ಜನ್ಮವೇ ಸಿಕ್ಕಿತ್ತು. ಅವರ ನಟನೆಯನ್ನು ನೋಡಿದರೆ ವಿಷ್ಣು ದಾದ ನೆನಪಾಗುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ.ಇಂತಿಪ್ಪ ಅನಿರುದ್ಧ್ ಗೆ ಇಂದು ಜನ್ಮದಿನದ